ಪ್ರಮುಖ ಸುದ್ದಿ
JDS ನಿಂದ ಮೂವರು ಅನರ್ಹ ಶಾಸಕರು ಉಚ್ಛಾಟನೆ : ದೇವೇಗೌಡರ ಆದೇಶ
ಬೆಂಗಳೂರು: ಸ್ವಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರದ ವಿರುದ್ಧವೇ ಬಂಡೆದ್ದು ಮುಂಬೈ ಸೇರಿದ್ದ ಮೂವರು ಜೆಡಿಎಸ್ ನ ಶಾಸಕರು ಸಹ ಈಗಾಗಲೇ ಅನರ್ಹರಾಗಿದ್ದಾರೆ. ಜೆಡಿಎಸ್ ಪಕ್ಷದ ನಾಯಕರ ದೂರಿನ ಮೇರೆಗೆ ಅಂದಿನ ಸ್ಪೀಕರ್ ರಮೇಶಕುಮಾರ್ ಅವರು ಹುಣಸೂರು ಕ್ಷೇತ್ರದ ಹೆಚ್.ವಿಶ್ವನಾಥ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಕೆ.ಗೋಪಾಲಯ್ಯ, ಕೆ.ಆರ್.ಪೇಟೆ ಕ್ಷೇತ್ರದ ಕೆ.ಸಿ.ನಾರಾಯಣಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಇಂದು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಆ ಮೂವರು ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿ ಆದೇಶಿಸಿದ್ದಾರೆ.