ಪ್ರಮುಖ ಸುದ್ದಿ
‘ದೇವೇಗೌಡರಿಗೆ ದುರಾಸೆ, ಸಿದ್ಧರಾಮಯ್ಯಗೆ ದ್ವೇಷ’ ಅಂದಿದ್ದೇಕೆ ಈ ಹಿರಿಯ ನಾಯಕ!
ಮಂಡ್ಯ: ದೇವೇಗೌಡರಿಗೆ ಎಲ್ಲವೂ ನನ್ನ ಮನೆಗೆ ಸಿಗಲಿ ಎಂಬ ದುರಾಸೆ. ಸಿದ್ಧರಾಮಯ್ಯಗೆ ಸೇಡು, ದ್ವೇಷ ದೇವೇಗೌಡರ ಗುಣವೇ ಬಂದಿದೆ ಎಂದು ಕೆ.ಆರ್ ಪೇಟೆಯಲ್ಲಿ ಹಿರಿಯ ರಾಜಕಾರಣಿ , ಮಾಜಿ ಸ್ಪೀಕರ್ ಕೃಷ್ಣ ಹೇಳಿದ್ದಾರೆ. ಇಂದಿನ ರಾಜಕೀಯ ಸಂದಿಗ್ಧತೆಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಅವರುಗಳೇ ಕಾರಣ ಆಗಿದ್ದಾರೆ.
ದೋಸ್ತಿ ಸರ್ಕಾರದ ರಚನೆ ಸಂದರ್ಭದಲ್ಲಿ ಎರಡೂವರೆ ವರ್ಷದಂತೆ ಅಧಿಕಾರ ಹಂಚಿಕೆ ಮಾತುಕತೆ ನಡೆಸಬೇಕಿತ್ತು. ಎರಡುವರೆ ವರ್ಷದವರೆಗೆ ಶಾಸಕರು ಕಾಯುತ್ತ ಕಾಲ ಕಳೆಯುತ್ತಿದ್ದರು. ಬಳಿಕ ರೇವಣ್ಣಗೆ ಉಪಮುಖ್ಯಮಂತ್ರಿ ಮಾಡಿದ್ದರೂ ಆಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ಸ್ಪೀಕರ್ ರಮೇಶ ಕುಮಾರ್ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡಿದ್ದಾರೆ. ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಮಾಜಿ ಸ್ಪೀಕರ್ ಕೃಷ್ಣ ಅವರು ಹೇಳಿದ್ದಾರೆ.