ಸಿದ್ಧರಾಮಯ್ಯಗೆ ಬೆಳಸಿದ್ದು ಯಾರು -ದೇವೇಗೌಡರ ಪ್ರಶ್ನೆ
ಸಿದ್ಧರಾಮಯ್ಯ ಹೆಗಡೆ ಅವರಿಗಿಂತ ದೊಡ್ಡ ಲೀಡರಾ?
ಕೊಪ್ಪಳ: ನಾನು ಈ ಹಿಂದೆ 1996 ಮತ್ತು 2004ರಲ್ಲಿ ಎರಡು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರುವುದನ್ನು ತಪ್ಪಿಸಲಾಗಿತ್ತು ಅಂತ ಸಿಎಂ ಸಿದ್ಧರಾಮಯ್ಯ ಇತ್ತೀಚೆಗಷ್ಟೆ ಕಾರ್ಯಕ್ರಮ ಒಂದರಲ್ಲಿ ಹೇಳಿ ಕೊಂಡಿದ್ದರು. ಅದೇ ಪಕ್ಷದಲ್ಲಿದ್ದರೆ ಇನ್ನೂ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಗುಡುಗಿದ್ದರು.
ಇಂದು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗವಿಸಿದ್ದೇಶ್ವರ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ಧರಾಮಯ್ಯಗೆ ಉಪ ಮುಖ್ಯಮಂತ್ರಿ ಆಗುವವರೆಗೆ ರಾಜಕೀಯವಾಗಿ ಬೆಳೆಸಿದ್ದು ಯಾರು ಎಂದು ಮರು ಪ್ರಶ್ನೆ ಹಾಕುವ ಮೂಲಕ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯ ಅವರೇನು ರಾಮಕೃಷ್ಣ ಹೆಗಡೆ ಅವರಿಗಿಂತ ದೊಡ್ಡ ಲೀಡರ್ ಅಲ್ಲ ಎಂದರು. ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗೋದನ್ನು ನಾನು ತಪ್ಪಿಸಿಲ್ಲ. ಹಣ, ಅಧಿಕಾರ, ಅಹಂಕಾರ ಇದೆ, ಸಿದ್ಧರಾಮಯ್ಯ ಮಾತನಾಡುತ್ತಿದ್ದಾರೆ. ಮಾತನಾಡಲಿ ಬಿಡಿ, ಮುಂದೊಂದು ದಿನ ಅವರಿಗೆ ಈ ಬಗ್ಗೆ ಅರಿವು ಮೂಡುತ್ತದೆ ಎಂದರು.