ಪ್ರಮುಖ ಸುದ್ದಿ
ಮಧ್ಯಂತರ ಚುನಾವಣೆ : ಜೆಡಿಎಸ್ ಏಕಾಂಗಿ ಸ್ಪರ್ದೆಗೆ ದೇವೇಗೌಡರ ನಿರ್ಧಾರ
ಬೆಂಗಳೂರು: 2020ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಮಧ್ಯಂತರ ಚುನಾವಣೆ ಆಗುವುದು ಗ್ಯಾರಂಟಿ. ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ದೆಗಿಳಿಯಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡು ಹೇಳಿದ್ದಾರೆ.
ಸದ್ಯದ ರಾಜಕೀಯ ಸ್ಥಿತಿಗತಿ ಅವಲೋಕಿಸಿದರೆ ಮಧ್ಯಂತರ ಚುನಾವಣೆ ಸಾಧ್ಯತೆ ಹೆಚ್ಚಾಗಿದೆ. ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿರಬೇಕು. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನಪರ ಕೆಲಸ ಮಾಡಿದರೂ ಸೂಕ್ತ ಬೆಂಬಲ ಸಿಗಲಿಲ್ಲ. ಈಗ ನಾವು ಮತ್ತೆ ಅದೇ ತಪ್ಪು ಮಾಡದೆ. ಏಕಾಂಗಿಯಾಗಿ ಹೋರಾಟ ಮಾಡೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.