ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದೇನು..?
ದೇಶದ ಆರ್ಥಿಕ ಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದೇನು..?
ಹುಬ್ಬಳ್ಳಿಃ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಬೆಂಗಳೂರಿನ ಬಿಬಿಎಂಪಿ ಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿರುವುದು ಜಾತ್ಯಾತೀತ ನಿಲುವು ಉಳಿಸಿಕೊಂಡು ಹೋಗುವ ಉದ್ದೇಶದಿಂದ ಮಾತ್ರ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿದರು.
ನಗರದ ಕಾರ್ಯಕರ್ತ ಸಿದ್ಧಲಿಂಗಯ್ಯ ಹಿರೇಮಠ ಎಂಬುವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಮೇಯರ್ ಸ್ಥಾನ ನಮಗೆ ನೀಡಬೇಕೆಂಬ ಷರತ್ತ ಹೊಂದಿದ್ದರು, ಯಾವುದೇ ಲಿಖಿತ ಒಪ್ಪಂದ ಮಾಡಿರಲಿಲ್ಲ ಎಂದರು.
ಕೇಂದ್ರ ಸರ್ಕಾರದ ಬಗ್ಗೆ ಹೇಳಬೆಂಕದರೆ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಈ ಹಿಂದೆ ಆರ್ಥಿಕ ಸಚಿವರಾಗಿದ್ದ ಅನುಭವಿಗಳು ಆದ ಅವರದೇ ಪಕ್ಷದ ಹಿರಿಯರಾದ ಯಶವಂತ್ ಸಿಂಹ ಮತ್ತು ಚಂದ್ರಶೇಖರ ಸೇರಿದಂತೆ ಆರ್ಥಿಕ ತಜ್ಞರು ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಸುಬ್ರಹ್ಮಣ್ಯ ಸ್ವಾಮಿಯವರು ಎಚ್ಚರಿಸಿದ್ದರು. ಅಷ್ಟೆ ಅಲ್ಲದೆ ಆರ್‍ಎಸ್‍ಎಸ್‍ನ ಕೆಲ ಮುಖಂಡರು ಸಹ ಆರ್ಥಿಕ ಸ್ಥಿತಿ ಬಗ್ಗೆ ಎಚ್ಚರಿಸಿದ್ದರು. ಆದಾಗ್ಯ ಪ್ರಧಾನಿ ಮಂತ್ರಿಗಳು ತಜ್ಞರ ಸಲಹೆ ತೆಗೆದುಕೊಳ್ಳುತ್ತಿಲ್ಲ. ಅವರ ಅಭಿಪ್ರಾಯ ಪರಿಗಣಿಸುತ್ತಿಲ್ಲ. ಎಲ್ಲವೂ ಬಲ್ಲವರಾಗಿದ್ದಾರೆ ಪ್ರಧಾನಿಗಳು ಎಂದು ಕುಟುಕಿದರು.
ರಾಜ್ಯ ಸರ್ಕಾರದ ವೈಫಲ್ಯತೆ ವಿರುದ್ಧ ನಮ್ಮ ಪ್ರಚಾರ
ಇದೇ ಸಂದರ್ಭದಲ್ಲಿ ಸಿಎಂ ಸಿದ್ರಾಮಯ್ಯನವರ ವಿರುದ್ಧವು ವಾಗ್ದಾಳಿ ನಡೆಸಿದ ದೇವೆಗೌಡರು, ಸಿಎಂ ಎಲ್ಲಾ ಭರವಸೆ ಈಡೇರಿಸಿದ್ದೇನೆ ಎಂದು ಹೇಳುತ್ತಾರೆ. ಎಲ್ಲವೂ ಈಡೇರಿಸಿದ್ದರೆ, ರಾಜ್ಯದಲ್ಲಿ ಸಾವಿರಾರು ಜನ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು.? ಸುಳ್ಳು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧವೇ ನಮ್ಮ ಪ್ರಚಾರ. ಬರುವ ಚುನಾವಣೆಯಲ್ಲಿ ಸರ್ಕಾರದ ಸಾಕಷ್ಟು ವೈಫ್ಯಲತೆ ಕುರಿತು ಪಟ್ಟಿ ಮಾಡಿ ಜನರ ಮುಂದೆ ಹಿಡಲಾಗುವುದು ಎಂದರು.