ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲಿಯೇ ಪೆನ್ ಡ್ರೈವ್ ಆಡಿಯೋ ಕೇಳಿಸುವೆ – HDK
ಚಲುವನಾರಾಯಣಸ್ವಾಮಿ ರಾಜೀನಾಮೆಗೆ ಆಗ್ರಹ
ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲಿಯೇ ಪೆನ್ ಡ್ರೈವ್ ಆಡಿಯೋ ಕೇಳಿಸುವೆ – HDK
ವರ್ಗಾವಣೆ ದಂಧೆ ಭ್ರಷ್ಟಚಾರದ ಸಾಕ್ಷಿಯನ್ನು ಸದನದಲ್ಲಿ ಪ್ರಸ್ತುತ ಪಡಿಸುವೆ – ಕುಮಾರಸ್ವಾಮಿ
ವಿವಿ ಡೆಸ್ಕ್ಃ ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆಯ 10 ಕೋಟಿ ಡೀಲಿಂಗ್ ಬಗ್ಗೆ ಪೆನ್ ಡ್ರೈವ್ನಲ್ಲಿರುವ ಸಾಕ್ಷಿಯ ಆಡಿಯೋವನ್ನು ಸ್ಪೀಕರ್ ಅನುಮತಿ ನೀಡಿದರೆ ಸದನದಲ್ಲಿಯೇ ಕೇಳಿಸುವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿತ್ಯ ಒಂದೊಂದು ಬಾಂಬ್ ಸಿಡಿಸುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಕುಮಾರಸ್ವಾಮಿ ಅವರು, ಗುರುವಾರ ಸಚಿವ ಚಲುವರಾಯಸ್ವಾಮಿ ವಿರುದ್ಧವು ಕೆಂಡಕಾರಿದರು.
ಸರ್ಕಾರಿ ಬಸ್ ಚಾಲಕ ಕಮ್ ನಿರ್ವಾಹಕ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿರುವಸು ಅಚಿವರ ಕಿರುಕುಳದಿಂದ ಆತ್ಮಹತ್ಯೆ ಪ್ರಯತ್ನ ಮಾಡಿದ ಚಾಲಕ ಜಗಧೀಶ, ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಬರೆದಿಟ್ಟು ಆತ್ಮಹತ್ಯೆ ಗೆ ಯತ್ನಿಸಿ ಸಾವು ನೋವಿನ ಮಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಬಲವಾಗಿ ಪ್ರತಿಪಾದಿಸುವ ಮೂಲಕ ರಾಜೀನಾಮೆಗೂ ಒತ್ತಾಯಿಸಿದರು.