ಪ್ರಮುಖ ಸುದ್ದಿ

ಎಚ್‍ಡಿಕೆ ವಾಸ್ತವ್ಯ ಮಾಡಿ ವರ್ಷ ತಾಪಂ ಸದಸ್ಯನಿಂದ ವಿಶಿಷ್ಟ ಆಚರಣೆ

ಎಚ್‍ಡಿಕೆ ವಾಸ್ತವ್ಯ ಮಾಡಿದ್ದ ಸ್ಮರಣಾರ್ಥ ಚಂಡರಕಿಯಲ್ಲಿ ಕಾರ್ಯಕ್ರಮ
ಶಾಲಾ ಶಿಕ್ಷಕರಿಗೆ, ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಯಾದಗಿರಿ: ಜಿಲ್ಲೆಯ ಗಡಿ ಭಾಗದ ಚಂಡರಕಿ ಗ್ರಾಮದಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಶಾಲೆ ವಾಸ್ತವ್ಯ ಮಾಡಿ ವರ್ಷ ತುಂಬಿದ ಹಿನ್ನೆಲೆ ಸ್ಮರಣಾರ್ಥವಾಗಿ ಗ್ರಾಮದ ಶಾಲೆಯಲ್ಲಿ ಪುಟಪಾಕ ತಾ.ಪಂ.ಸದಸ್ಯ ನಾಗೇಂದ್ರಪ್ಪ ಚಂಡರಕಿ ನೇತೃತ್ವದಲ್ಲಿ ಕೇಕ್ ಕತ್ತರಿಸಿ, ಕೊರೊನಾ ಯೋಧರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗೇಂದ್ರಪ್ಪ, ಆಗಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ, ಗಡಿ ಗ್ರಾಮವನ್ನು ಆಯ್ಕೆ ಮಾಡಿ, ನಮ್ಮೂರ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ.  ಅಂದು ಇಡಿ ಸರ್ಕಾರವೇ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಸ್ಥಳದಲ್ಲಿಯೇ ಸೂಚನೆ ನೀಡಿರುವದು ನಮಗೆಲ್ಲ ತಿಳಿದಿರುವ ವಿಷಯ. ಅಲ್ಲದೆ ಶಾಸಕರೂ ನಮ್ಮವರೇ ಇರುವುದು ಅಭಿವೃದ್ಧಿಗೆ ಪೂರಕವಾಗಿದೆ. ಯುವ ನಾಯಕ ಶರಣಗೌಡ ಕಂದಕೂರ ಅವರು ಸಹ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ನಾವೆಲ್ಲರೂ ಅವರಿಗೆ ಬೆಂಬಲವಾಗಿರಬೇಕು ಎಂದರು.

hಕೊರೊನಾ ಸಂದರ್ಭದಲ್ಲಿ ನಾವೆಲ್ಲಾ ಅಗತ್ಯ ಎಚ್ಚರಿಕೆಯಿಂದಿರಬೇಕು, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ತಿಳಿಸಿದರು. ಇದೇ ವೇಳೆ ಅಂಗನವಾಡಿ, ಆಶಾ ಕಾರ್ಯಕರ್ತೆರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಮತ್ತು ಪಶು ಆಸ್ಪತ್ರೆಯ ಸಿಬ್ಬಂದಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು. ಜೆಡಿಎಸ್ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.
——————-

Related Articles

Leave a Reply

Your email address will not be published. Required fields are marked *

Back to top button