ಪ್ರಮುಖ ಸುದ್ದಿ
‘ರಾಹುಲ್ ಗಾಂಧಿ ಈಗ ಸಿದ್ಧರಾಮಯ್ಯ ಪಂಜರದ ಗಿಣಿ’ – ಹೆಚ್.ಡಿ.ಕೆ ವ್ಯಂಗ್ಯ
ರಾಮನಗರ: ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಂಜರದ ಗಿಣಿ ಆಗಿದ್ದಾರೆ. ಪರಿಣಾಮ ಸಿಎಂ ಸಿದ್ಧರಾಮಯ್ಯ ಅವರ ನುಡಿಗಳನ್ನು ಪುನರುಚ್ಛಾರ ಮಾಡುತ್ತಿದ್ದಾರೆ. ಮೊನ್ನೆ ಜೆಡಿಎಸ್ ಬಿಜೆಪಿಯ ಬಿಟೀಮ್ ಅಂದರು. ನಿನ್ನೆ ಜೆಡಿಎಸ್ ಅಂದರೆ ಜನತಾದಳ ಸಂಘ ಪರಿವಾರ ಅಂದರು. ರಾಹುಲ್ ಮಾತು ಕೇಳಿ ಖುದ್ದು ಕೆಪಿಸಿಸಿ ಅದ್ಯಕ್ಷ ಪರಮೇಶ್ವರ ಅವರೇ ತಲೆ ಚಚ್ಚಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಗಡಿ ಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಕಾವೇರಿಯ ಪುಣ್ಯ ಸ್ಥಳದಲ್ಲಿ ರಾಹುಲ್ ಜೆಡಿಎಸ್ ಕೆಣಕ್ಕಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷವೇ ಜೆಡಿಎಸ್ ನ ಬಿಟೀಮ್ ಆಗಿದೆ ಎಂಬುದು ಪಾಪ ರಾಹುಲ್ ಗಾಂಧಿಗೆ ಗೊತ್ತಿಲ್ಲ ಎಂದರು. ಅಲ್ಲದೆ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸಬೇಕಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.