ಪ್ರಮುಖ ಸುದ್ದಿ
1 ವರ್ಷ ಯಾರೂ ಟಚ್ ಮಾಡೋಕಾಗಲ್ಲ – ಸಿಎಂ ಹೆಚ್.ಡಿ.ಕೆ ಮಾತಿನ ಮರ್ಮವೇನು?
ಬೆಂಗಳೂರು : ಒಂದು ವರ್ಷ ಕಾಲ ಯಾರೂ ನನ್ನನ್ನು ಟಚ್ ಮಾಡೋಕೆ ಆಗೋದಿಲ್ಲ. ನನಗೆ ಪೃಕೃತಿಯ ಕೃಪೆಯೂ ಸಿಕ್ಕಿದ್ದು ಉತ್ತಮ ಮಳೆ ಆಗಿದೆ. ಹೀಗಾಗಿ, ಮುಂಬರುವ ಲೋಕಸಭೆ ಚುನಾವಣೆವರೆಗೂ ನಾನು ಮುಖ್ಯಮಂತ್ರಿ ಆಗಿರೋದರಲ್ಲಿ ಅನುಮಾನ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉತ್ತಮ ಕೆಲಸ ಮಾಡುತ್ತ ಮುಂದೆ ಸಾಗುವವರಿಗೆ ಕಾಲು ಎಳೆಯುವವರು ಇದ್ದೇ ಇರುತ್ತಾರೆ. ರಾಜಕಾರಣದಲ್ಲಿ ಇದೆಲ್ಲಾ ಸಾಮಾನ್ಯ. ಆದರೆ, ಒಂದು ವರ್ಷ ಕಾಲವಂತೂ ನನ್ನನ್ನೂ ಯಾರೂ ಟಚ್ ಮಾಡೋಕೆ ಆಗೋದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ, ಹೆಚ್.ಡಿ.ಕೆ ಮನದಾಳ ಮಾತಿನ ಹಿಂದಿನ ಮರ್ಮವೇನು ಎಂಬುದರ ಬಗ್ಗೆ ರಾಜಕೀಯ ವಿಶ್ಲೇಕರು ಭಾರೀ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.