ವಿದ್ಯಾರ್ಥಿಗಳಲ್ಲಿ ಛಲವಿರಲಿ ಅಭ್ಯಾಸದ ಶ್ರಮವಿರಲಿ
ವಿದ್ಯಾರ್ಥಿಗಳಲ್ಲಿ ಛಲವಿರಲಿ ಅಭ್ಯಾಸದ ಶ್ರಮವಿರಲಿ
ಶಹಾಪುರಃ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೆ ಪ್ರಾಮುಖ್ಯವಾಗಿ ವಿದ್ಯಾರ್ಥಿಗಳು ಗುರಿಯನ್ನು ಹೊಂದಿರಬೇಕು. ಆ ಗುರಿ ತಲುಪಲು ಬೇಕಾದ ಗುರುಗಳ ಮಾರ್ಗದರ್ಶನ ಮತ್ತು ಸಮರ್ಪಕವಾಗಿ ಜ್ಞಾನವನ್ನು ಒದಗಿಸುವ ತರಬೇತಿ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿ ಈಡೇರಿಸಿಕೊಳ್ಳಬೇಕು ಎಂದು ದೇವಿಂದ್ರಪ್ಪ ವಿಶ್ವಕರ್ಮ ಕನ್ಯಾಕೋಳೂರ ಹೇಳಿದರು.
ನಗರದ ಕನಸು ಕರಿಯರ್ ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ನಡೆದ ಒಂದು ದಿನದ ಕಾರ್ಯಗಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರಸಕ್ತ ಸಾಕಷ್ಟು ಅವಕಾಶಗಳಿವೆ. ತಮ್ಮ ಗುರಿ ತಲುಪು ಇಂತಹ ಅಕಾಡೆಮಿ ಕೇಂದ್ರಗಳು ಅಭ್ಯಾಸ ಮಾಡುವ ಕುರಿತು ವಿಷಯಗಳ ಕುರಿತು ಸೂಕ್ತ ತರಬೇತಿ ನೀಡಿಲಿದ್ದಾರೆ. ವಿದ್ಯಾರ್ಥಿಗಳು ನಮ್ಮ ನಗರಕ್ಕೆ ದೊರೆತ ಇಂತಹ ಅಕಾಡೆಮಿ ಕೇಂದ್ರದ ಅವಕಾಶವನ್ನು ಬಳಸಿಕೊಂಡು ತಮ್ಮ ಗುರಿ ಹೊಂದುವತ್ತ ಸಾಗಬೇಕು ಎಂದು ಕರೆ ನೀಡಿದರು.
ಇಂತಹ ಸಮರ್ಪಕ ಅಧ್ಯಯನ ಕೇಂದ್ರಗಳು ತಾಲೂಕು ಮಟ್ಟದಲ್ಲಿ ದೊರೆಯುವುದು ಕಷ್ಟ, ದೂರದ ಧಾರವಾಡ, ಹುಬ್ಬಳ್ಳಿ ಸೇರಿದಂತೆ ಕಲಬುರ್ಗಿಯಂತಹ ನಗರಕ್ಕೆ ಹೋಗುವ ಅನಿವಾರ್ಯತೆ ಇತ್ತು ಪ್ರಸ್ತುತ ಕನಸು ಅಕಾಡೆಮಿ ಕೇಂದ್ರ ಆ ಕೊರತೆಯನ್ನು ನೀಗಿಸಿದೆ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕೆಂದರು.
ಉಪನ್ಯಾಸಕರಾದ ಶರಣಗೌಡ ಓಂಕಾರ ಮತ್ತು ಶ್ರೀಶೈಲ್ ಮಠ ಅವರು ಶಿಕ್ಷಣ ವಿದ್ಯಾರ್ಥಿಗಳ ಗುರಿ ತಲುಪಲು ಮಾಡಬೇಕಾದ ಕೆಲಸ ಅಭ್ಯಾಸ ಮಾಡುವ ಸುಲಭ ವಿಧಾನ ಕುರಿತು ಉಪನ್ಯಾಸ ನೀಡಿದರು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಛಲವಿರಬೇಕು. ಛಲವಿದ್ದಲ್ಲಿ ನಿಮ್ಮ ಕನಸು ನನಸಾಗಲು ಸಾಧ್ಯವಿದೆ ಎಂದು ಮನಮುಟ್ಟುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಸಂಚಾಲಕ ಮಹೇಶ ಮತ್ತು ಮೌನೇಶ ಇತರರು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಭಾಗವಹಿಸಿದ್ದರು.