ಪ್ರಮುಖ ಸುದ್ದಿ
ಶ್ರೀರವಿಶಂಕರ ಗುರೂಜಿ ಆಗಮನ ಜ.21 ಪೂರ್ವಭಾವಿ ಸಭೆ
ಶ್ರೀ ರವಿಶಂಕರ ಗುರುಜೀ ಆಗಮನ ಹಿನ್ನೆಲೆ ನಾಳೆ ಪೂರ್ವ ಭಾವಿ ಸಭೆ
ಶಹಾಪುರಃ ಫೆಬ್ರವರಿ 4 ಮಂಗಳವಾರದಂದು ಪಟ್ಟಣಕ್ಕೆ ಆರ್ಟ್ ಆಫ್ ಲಿವಿಂಗ್ ನ ಶ್ರೀಶ್ರೀ ರವಿಶಂಕರ ಗುರೂಜೀ ಆಗಮಿಸುತ್ತಿರುವ ಹಿನ್ನೆಲೆ ನಗರದ ಕುಂಬಾರಗೇರಿ ಹಿರೇಮಠದಲ್ಲಿ ನಾಳೆ ಜ.21 ರಂದು ಪೂರ್ವಭಾವಿ ಸಭೆ ಕರೆಯಲಾಗಿದ್ದು, ಸರ್ವರೂ ಸಭೆಗೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ವ್ಯಕ್ತಿ ವಿಕಾಸ ಕೇಂದ್ರ ಯಾದಗಿರಿ ಮನವಿ ಮಾಡಿದೆ.
ಸಭೆಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ. ತಾವೂಗಳು ಬನ್ನಿ ಶ್ರೀಗಳ ಕಾರ್ಯಕ್ರಮದ ಯಶಸ್ಸಿಗೆ ಪೂರಕ ವಾತಾವರಣ ನಿರ್ಮಿಸಬೇಕೆಂದು ಯಾದಗಿರಿಯ ವ್ಯಕ್ತಿ ವಿಕಾಸ ಕೇಂದ್ರ ಮನವಿ ಮಾಡಿದೆ.