ಪ್ರಮುಖ ಸುದ್ದಿ

ಯಾದಗಿರಿಯಲ್ಲಿ ನುಡಿಜಾತ್ರೆಗೆ ಅದ್ದೂರಿ ಚಾಲನೆ

ಮನೆಯಂಗಳದಲ್ಲಿ ಕನ್ನಡಕ್ಕೆ ಜಾಗವಿಲ್ಲ ಹೊನ್ಕಲ್ ವಿಷಾಧ

ಯಾದಗಿರಿಃ ಗಡಿ ಭಾಗದಲ್ಲಿ ಕನ್ನಡ ಮರೀಚಿಕೆಯಾಗುತ್ತಿದೆ. ಕನ್ನಡ ಭಾಷೆ ಗಡಿ ಪ್ರದೇಶದಲ್ಲಿ ನಶಸಿ ಹೋಗುತ್ತಿದೆ. ಕನ್ನಡ ನಾಡಿನಲ್ಲಿದ್ದು, ಕನ್ನಡಿಗರಾಗಿ ಕನ್ನಡ ಭಾಷೆಯಲ್ಲಿ ಮಾತನಾಡದೇ ಅನ್ಯ ಭಾಷೆ ಬಳಕೆ ಮಾಡುತ್ತಿರುವದರಿಂದಲೇ ನಮ್ಮ ಮಾತೃ ಭಾಷೆಗೆ ಗಡಿ ಭಾಗದಲ್ಲಿ ಕಾಣೆಯಾಗುತ್ತಿದೆ ಎಂದು ಸಾಹಿತಿ ಸಮ್ಮೇಳನದ ಅಧ್ಯಕ್ಷ ಸಿದ್ಧರಾಮ ಹೊನ್ಕಲ್ ವಿಷಾಧ ವ್ಯಕ್ತಪಡಿಸಿದರು.

ನಗರದಲ್ಲಿ ಅದ್ದೂರಿಯಾಗಿ ಚಾಲನೆ ದೊರೆತ 4 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಅನ್ಯ ಭಾಷೆ ಮಾತಾಡುವ ಬದಲು ನಮ್ಮ ಕನ್ನಡ ಭಾಷೆಯಲ್ಲಿಯೇ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ದೊರೆಯಲಿ ಮಾನ್ಯತೆ, ನಾಗರಿಕರು ಗಡಿ ಭಾಗದಲ್ಲಿ ಪಕ್ಕದ ರಾಜ್ಯ ಭಾಷೆಯಲ್ಲಿಯೇ ಕನ್ನಡಿಗರು ಮಾತನಾಡುತ್ತಾ ಹೋದಲ್ಲಿ ಮಾತೃ ಭಾಷೆಯನ್ನು ನಾವೇ ಸ್ವತಃ ಕುಳಿತು ಕಗ್ಗೊಳೆ ಮಾಡಿದಂತಾಗುತ್ತದೆ. ಇದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ನಾಡಿನ ಸಂಸ್ಕೃತಿ, ಭಾಷೆ, ಮರೀಚಿಕೆಯಾಗಲಿದೆ.

ನಮ್ಮ ನಾಡು ಪ್ರದೇಶ, ಕನ್ನಡ ಜಲ, ಭೂಮಿ ವಿಕಾಸ ಹೊಂದಬೇಕಿದ್ದಲ್ಲಿ ಕನ್ನಡಿಗರೆಲ್ಲರೂ ಕನ್ನಡದಲ್ಲಿಯೇ ಮಾತನಾಡಿ, ನಿಮ್ಮ ಜೊತೆಗಿರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಸರ್ಕಾರ ಗಡಿ ಭಾಗದ ಜಿಲ್ಲೆಯನ್ನು ಕಡೆಗಣಿಸಿದೆ. ಯಾದಗಿರಿ ಜಿಲ್ಲೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಮೂಲ ಸೌಕರ್ಯ ಹಣ ಒದಗಿಸಬೇಕೆಂದು ಮನವಿ ಮಾಡಿದರು. ನಾಡು ರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಕನ್ನಡ ಉಳಿವಿಗೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ನಗರದಲ್ಲಿ ಆರಂಭಗೊಂಡು ನುಡಿಜಾತ್ರೆಗೆ ಎಲ್ಲೆಡೆ ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ನೃತ್ಯ ಅನಾವರಣಗೊಳಿಸಿದ್ದವು. ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಸಮಾರಂಭ ಸ್ಥಳಕ್ಕೆ ಕರೆ ತರಲಾಯಿತು.
ಸಾಹಿತ್ಯ ಸಮ್ಮೇಳನವನ್ನು ಸಹಕಾರಿ ಇಲಾಖೆಯ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಉದ್ಘಾಟಿಸಿದರು. ಸಮ್ಮೇಳನದ ಧ್ವಜಾರೀಹಣವನ್ನು ಶಾಸಕ ವೆಂಕಟರಡ್ಡಿ ಮುದ್ನಾಳ ನೆರವೇರಿಸಿದರು. ಈ ಸಂದರ್ಭದಲ್ಲಿ ತುಮಕೂರಿನ ವಿಶ್ವರಾಧ್ಯ ಶ್ರೀ, ಗುರುಮಠಕಲ್ ಶಾಸಕ ನಾಗಣ್ಣಗೌಡ ಕಂದಕೂರ, ಡಾ.ರಂಗರಾಜ ವನದುರ್ಗ  ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿಗಳು, ಕವಿಗಳು ರಚಿಸಿದ 12 ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಯುವ ಸಾಹಿತಿ, ಬರಹಗಾರರಿಗೆ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ವಿವಿಧ ಗೋಷ್ಠಿಗಳು ಜರುಗಿದವು. ಚರ್ಚೆಯಲ್ಲಿ ಸಾಕಷ್ಟು ಯುವ ಸಮೂಹ ಭಾಗವಹಿಸಿದ್ದರು. ಒಟ್ಟಾರೆ ಸೋಮವಾರ ಗಡಿಭಾಗದಲ್ಲಿ ಕನ್ನಡದ ಕಂಪು ಬೀರುವ ಕೆಲಸವನ್ನು ಕಸಾಪ ಮಾಡಿದೆ. ಮಂಗಳವಾರ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button