ಇಂದಿನ ರಾಶಿಫಲ ನೋಡಿ ಮುಂದೆ ಸಾಗಿ..
ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ನೆನೆಯುತ್ತ, ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಪೂರ್ವ ಪಾಲ್ಗುಣಿ
ಋತು : ಗ್ರೀಷ್ಮ
ರಾಹುಕಾಲ 07:30 – 09:07
ಗುಳಿಕ ಕಾಲ 13:55 – 15:32
ಸೂರ್ಯೋದಯ 05:54:01
ಸೂರ್ಯಾಸ್ತ 18:44:05
ತಿಥಿ : ಅಷ್ಟಮಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವಿರೋಧಿ ವರ್ಗದಿಂದ ಉಪಟಳ ಹೆಚ್ಚಾಗುವ ಸಾಧ್ಯತೆ. ಹಣಕಾಸಿನಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಇಂದು ನೀವು ವಾದಗಳಲ್ಲಿ ಹಾಗೂ ಸಂದಾನದ ಮಧ್ಯಸ್ಥಿಕೆ ವಹಿಸಿಕೊಳ್ಳ ಬೇಡಿ. ಮಕ್ಕಳಲ್ಲಿ ಶೈಕ್ಷಣಿಕ ಆತ್ಮವಿಶ್ವಾಸ ತುಂಬುವ ಕೆಲಸ ನಿಮ್ಮಿಂದ ಆಗಬೇಕಾಗಿದೆ. ನಿಮ್ಮ ವಿರೋಧಿ ವರ್ಗದ ಜನಗಳನ್ನು ಗುರುತಿಸಿ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಉದ್ಯೋಗದಲ್ಲಿ ವಿಶ್ವಾಸದ ಹೆಜ್ಜೆ ಮತ್ತು ಚೈತನ್ಯದ ಚಿಲುಮೆ ಮೂಡಿಬರಲಿದೆ, ಅಂದುಕೊಂಡ ಕಾರ್ಯದಲ್ಲಿ ಯಶಸ್ವಿ ನಿರ್ವಹಣೆ ಮಾಡುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಷಭ ರಾಶಿ
ಸುಮ್ಮನೆ ಕನಸನ್ನು ಕಾಣುತ್ತಾ ಕುಳಿತರೆ ಫಲವಿಲ್ಲ ಅದನ್ನು ನನಸಾಗಲು ಪ್ರಯತ್ನ ಮಾಡುವುದು ಒಳ್ಳೆಯದು. ಮಾಡುವ ಕಾರ್ಯದಲ್ಲಿ ಪರಿಶ್ರಮ ಹಾಗೂ ಬುದ್ಧಿವಂತಿಕೆ ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ದಾರಿಯನ್ನು ಕಾಣಬಹುದಾಗಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು ಅದರ ಕಡೆಗೆ ಗಮನವಹಿಸಿ. ಇಂದು ಮನೆಯಲ್ಲಿನ ಉಪಯೋಗವಾಗುವಂತಹ ಕೆಲಸವನ್ನು ಮಾಡುವಿರಿ ಹಾಗೆಯೇ ಆರ್ಥಿಕವಾಗಿ ಇದರಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ಸಹ ಸಿಲುಕುವ ಸಾಧ್ಯತೆ ಇದೆ. ಯೋಜನೆಗಳಲ್ಲಿ ಆತ್ಮವಿಶ್ವಾಸ, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಅವಿರತ ದುಡಿಮೆ ಇವುಗಳನ್ನು ಪಾಲಿಸಿ ಖಂಡಿತವಾಗಿ ಸಕಾರಾತ್ಮಕ ಫಲಿತಾಂಶ ನಿಮಗೆ ದೊರೆಯಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕೌಟುಂಬಿಕ ಘರ್ಷಣೆಯನ್ನು ತಪ್ಪಿಸಲು ಪ್ರಯತ್ನಿಸಿ, ಸಾಧ್ಯವಾದರೆ ಹಿರಿಯರ ಜೊತೆಗೆ ಸಂಧಾನ ಸಭೆಯನ್ನು ನಡೆಸುವುದು ಒಳಿತು. ನಿಮ್ಮ ವರ್ಚಸ್ಸು ಹಾಗೂ ಕೆಲಸದಲ್ಲಿನ ಶೈಲಿಯನ್ನು ಯಾವುದೇ ಸಮಸ್ಯೆಯಾಗದಂತೆ ವೃದ್ಧಿಸಿಕೊಳ್ಳಿ. ಅಂದುಕೊಂಡ ಯೋಜನೆಯಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಗುರುಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮಲ್ಲಿನ ದುಡುಕಿನ ಸ್ವಭಾವದಿಂದ ಸಮಸ್ಯೆಗಳು ಹೆಚ್ಚಾಗಬಹುದು ಎಚ್ಚರಿಕೆಯಿರಲಿ. ಗೊತ್ತಿರುವ ಕಾರ್ಯ ಹಾಗೂ ನಂಬಿರುವ ವಿದ್ಯೆಯು ನಿಮ್ಮನ್ನು ಪ್ರಬಲರನ್ನಾಗಿ ಮಾಡುತ್ತದೆ. ಆರ್ಥಿಕ ದೃಷ್ಟಿಯಿಂದ ಬಲಿಷ್ಠತೆ ಪ್ರಾಪ್ತಿಯಾಗಲಿದೆ.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262
ಕಟಕ ರಾಶಿ
ಬರುವ ಅವಕಾಶಗಳು ಸಮಗ್ರವಾಗಿ ಅಧ್ಯಯನ ನಡೆಸಿ ಬಳಸಿಕೊಳ್ಳಿ. ಆತ್ಮೀಯ ವರ್ಗದಿಂದ ಹಣಕಾಸಿನ ನೆರವು ದೊರೆಯಲಿದೆ. ಕುಟುಂಬದಲ್ಲಿ ನಡೆಯುವ ಮುಸುಕಿನ ಕಲಹಗಳನ್ನು ತಿಳಿಗೊಳಿಸಿ. ಕೆಲವು ಯೋಜನೆಗಳಲ್ಲಿ ನೀವು ಬಲಿಷ್ಠರಾಗಿ ಹಾಗೂ ಧೈರ್ಯದಿಂದ ಒಪ್ಪಿಕೊಂಡು ಮಾಡುವ ಅವಶ್ಯಕತೆ ಇದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಸಿಂಹ ರಾಶಿ
ನಿಮ್ಮ ಕೆಲವು ಬಾಲಿಶ ವರ್ತನೆಗಳು ತೆಗೆದುಹಾಕಿ. ಜನರು ನಿಮ್ಮ ಕಾರ್ಯಶೈಲಿಯನ್ನು ನೋಡುವಾಗ ಹಾಗೆ ಕಾರ್ಯವನ್ನು ಮಾಡಿ. ಕೆಲವು ಮಧ್ಯಸ್ಥಿಕೆ ವ್ಯವಹಾರ ನಿಮಗೆ ಬಹುದೊಡ್ಡ ಸಮಸ್ಯೆ ನೀಡಬಹುದಾಗಿದೆ ಎಚ್ಚರವಿರಲಿ. ನಿರಂತರವಾಗಿ ಸಂಕಷ್ಟಗಳು ಹಾಗೂ ಪರಿಹಾರಗಳು ಕಂಡು ನಿಮ್ಮ ಜೀವನ ಯಾವುದಕ್ಕೂ ದೃತಿಗೆಡದೆ ಧೈರ್ಯ ದಿಂದ ನಿಭಾಯಿಸುವ ಶಕ್ತಿ ನಿಮಗೆ ವರದಾನವಾಗಿದೆ. ಮಾನಸಿಕ ಸ್ಥಿತಿಯನ್ನು ಉತ್ತಮ ಗೊಳಿಸಿಕೊಳ್ಳುವುದು ಮುಖ್ಯ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಹಲವು ದಿನದ ಕಚೇರಿ ಕೆಲಸಗಳು ನಿರಾಳವಾಗಿ ಗೆಲುವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ವಿರೋಧಿಗಳು ಹೆಚ್ಚಾಗಬಹುದು. ಹೂಡಿಕೆಗಳ ಬಗ್ಗೆ ವ್ಯವಸ್ಥಿತ ನಿಗಾ ಇರಲಿ. ವ್ಯವಹಾರ ನಿಮಿತ್ತ ಉತ್ತಮ ಲಾಭವಿದ್ದರೂ ಕೈಯಲ್ಲಿ ಹಣ ನಿಲ್ಲುವುದು ಕಡಿಮೆ. ನಿಮ್ಮ ಆಲಸ್ಯ ಹಾಗೂ ನಿರಾಸಕ್ತಿಯಿಂದ ಕಾರ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಹಾಯಕ್ಕೆ ಬಂಧುಮಿತ್ರರು ಬರುವರೆಂಬ ನಿಮ್ಮ ಭಾವನೆ ಹುಸಿಯಾಗಬಹುದು. ನಿಮ್ಮ ಬಾಳಸಂಗಾತಿಯ ಯೋಚನಾಲಹರಿ ಉತ್ತಮವಾಗಿದ್ದು ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಆರ್ಥಿಕವಾಗಿ ಬಹಳಷ್ಟು ಬದಲಾವಣೆ ಆಗಲಿದೆ. ಉತ್ತಮ ರೀತಿಯ ಆದಾಯಗಳಿಕೆ ಸಾಧ್ಯವಿದೆ. ಮನೆಯಲ್ಲಿ ಶುಭ ಕಾರ್ಯ ಹಾಗೂ ಶುಭ ಸುದ್ದಿ ನಿಮಗೆ ಬರಲಿದೆ. ಕೆಲಸದಲ್ಲಿನ ನಿಮ್ಮ ಜ್ಞಾನವು ಸಾಧನೆಗೆ ಪೂರಕವಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಕುಟುಂಬದವರ ಸಹಕಾರ ಸಿಗುವುದು ನಿಶ್ಚಿತ. ನಿಮ್ಮ ಮಾತಿನ ಶೈಲಿ ಹಲವಾರು ಜನಗಳನ್ನು ಅಭಿಮಾನಿ ರೀತಿಯಲ್ಲಿ ಸೃಷ್ಟಿಸುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮ ಕೆಲಸಗಳು ನಿರಾತಂಕವಾಗಿ ನಡೆಯಲಿದೆ ಕುಟುಂಬದಲ್ಲಿ ಅರಿತು ಬೆರೆತು ಜೀವನ ಸಾಗಿಸಬೇಕಾಗಿದೆ, ಪರಸ್ಪರ ವಿರೋಧಿಗಳು ಆಗುವುದು ಅಥವಾ ಅನುಮಾನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಉದ್ಯೋಗದಲ್ಲಿ ನಿಮ್ಮ ಕಾರ್ಯಶೈಲಿಯ ಮನಸೋತು ಹೆಚ್ಚಿನ ಬಡ್ತಿ ಅಥವಾ ಜವಾಬ್ದಾರಿ ಸಿಗುವ ಸಮಯವಾಗಿದೆ. ಲೇವಾದೇವಿ ವ್ಯವಹಾರದಿಂದ ಸಂಕಷ್ಟ ಪಡುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ದನಸ್ಸು ರಾಶಿ
ಶುಭಕಾರ್ಯದ ಸಿದ್ಧತೆ, ಧಾರ್ಮಿಕ ವಿಧಿ ವಿಧಾನಗಳಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆ. ಕೊಟ್ಟಿರುವ ಸಾಲವನ್ನು ವಾಪಸ್ಸು ಪಡೆಯಲು ಪ್ರಯತ್ನಿಸುತ್ತೀರಿ. ಆರ್ಥಿಕವಾಗಿ ಹಾಗೂ ಕೆಲಸದ ವಿಷಯವಾಗಿ ಯಶಸ್ವಿ ನಿಮ್ಮದಾಗಲಿದೆ. ಪತ್ನಿಯ ಜೊತೆಗೆ ಕೆಲವು ಸಮಾರಂಭಗಳಿಗೆ ಹೋಗುವ ಅವಕಾಶ ಸಿಗಲಿದೆ. ಆಸ್ತಿ ಹಣಕಾಸು ವಿಷಯವು ಕುಟುಂಬದಲ್ಲಿ ಇತ್ಯರ್ಥವಾಗಲಿದೆ.
ಶುಭ ಸಂಖ್ಯೆ 1
ಗಿರಿಧರ 9945098262
ಮಕರ ರಾಶಿ
ಹೂಡಿಕೆ ಮಾಡುವಾಗ ಸರಿಯಾದುದನ್ನು ಆರಿಸಿ. ಹಣಕಾಸಿನಲ್ಲಿ ಮಂದಗತಿಯ ಏಳಿಗೆ ಇದೆ, ಕೆಲವು ಸುಧಾರಣೆಗೆ ಪ್ರಾಶಸ್ತ್ಯ ನೀಡಿ. ನಿಮ್ಮಲ್ಲಿನ ವಿಲಾಸಿತನ ಹಾಗೂ ಆಲಸ್ಯ ತನವನ್ನು ತೆಗೆದುಹಾಕಿ. ಕೌಟುಂಬಿಕವಾಗಿ ಖರ್ಚುಗಳು ನಿಮಗೆ ದೊಡ್ಡ ತಲೆನೋವಾಗಲಿದೆ. ಮಕ್ಕಳ ವಿದ್ಯೆಯಲ್ಲಿ ಉತ್ತಮ ನಿರ್ವಹಣೆ ತೋರುವರು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕುಂಭ ರಾಶಿ
ಭಯಗ್ರಸ್ತ ವಾತಾವರಣ ಸೃಷ್ಟಿಯಾದರು ಯಾವುದೇ ಅಡ್ಡಿ-ಆತಂಕ ಬರಲಾರದು ಧೈರ್ಯವಾಗಿ ಕಾರ್ಯಗಳಲ್ಲಿ ಮುನ್ನುಗ್ಗಿ. ಕೆಲವು ವಿಷಯಗಳು ನಿಮ್ಮ ಮನಸ್ಸಿನಲ್ಲಿಯೇ ಇರುವುದು ಕ್ಷೇಮ. ನಿಮಗೆ ಸಿಗಲಿರುವ ಉತ್ತಮ ಅವಕಾಶದಿಂದ ಆರ್ಥಿಕ ಪರಿಸ್ಥಿತಿ ಸರಿಹೋಗುತ್ತದೆ. ಹಣಕಾಸಿನಲ್ಲಿ ಪ್ರಭುದ್ಧರಾಗಲು ವಿಶಾಲ ದೃಷ್ಟಿಕೋನ ಬೇಕಾಗಿರುವುದು ಅವಶ್ಯಕತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ಅನಿರೀಕ್ಷಿತವಾಗಿ ಹಣಕಾಸಿನಲ್ಲಿ ಬದಲಾವಣೆಯಾಗಲಿದೆ. ನಿಮ್ಮ ವ್ಯವಹಾರ ಲಾಭದಿಂದ ಕೂಡಿರುತ್ತದೆ. ಸಂಘ ಸಹವಾಸದಿಂದ ದಾರಿತಪ್ಪುವ ಸಾಧ್ಯತೆ ಇದ್ದು ಆದಷ್ಟು ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ಕುಟುಂಬದೊಡನೆ ಸಂತೋಷದ ಕ್ಷಣಗಳು ಕಾಣಬಹುದು. ಕೆಲವು ವಿಚಾರಗಳನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡು ಕಾರ್ಯಗಳಲ್ಲಿ ಧುಮುಕುವುದು ಒಳಿತು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಮದುವೆ, ಸಂತಾನ, ದಾಂಪತ್ಯ, ವಿದೇಶ ಪ್ರಯಾಣ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ಇನ್ನಿತರ ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗದರ್ಶನ ಸೂಚಿಸುತ್ತಾರೆ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262