ವಿನಯ ವಿಶೇಷ
ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರಿಂದ ಹೊಸ ವರ್ಷಾಚರಣೆ
ನೂತನ ವರ್ಷಾಚರಣೆ ಕೇಕ್ ಸವಿದು ಸಂಭ್ರಮಿಸಿದ ದರ್ಶನಾಪುರ
ಯಾದಗಿರಿ, ಶಹಾಪುರಃ ನೂತನ ವರ್ಷಾರಂಭ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನೌಕರ ಸಿಬ್ಬಂದಿಯವರಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕೇಕ್ ಕತ್ತರಿಸುವ ಮೂಲಕ ನೂತನ ವರ್ಷಾರಂಭವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ವರ್ಷ ಸರ್ಕಾರಿ ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಗುಣಮುಖರನ್ನಾಗಿ ಮಾಡಲಿ. ಕಷ್ಟ ನೋವು, ಕಹಿ ಘಟನೆಗಳೆಲ್ಲ ಮರೆಯಾಗಿ ಬರುವ ವರ್ಷ ಎಲ್ಲರಿಗೂ ಶುಭವನ್ನು ತರಲಿ.
ನಾಡಿನ ರೈತರಿಗೆ ಕಾಡುತ್ತಿರುವ ಬರಗಾಲ ಮರೀಚಿಕೆಯಾಗಿ ಸಮೃದ್ಧ ಮಳೆ ಬೆಳೆಯಾಗಿ ಶಾಂತಿ ನೆಮ್ಮದಿ ಕಲ್ಪಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ, ವೈದ್ಯಾಧಿಕಾರಿ ಡಾ.ಜಗಧೀಶ ಉಪ್ಪಿನ್, ಹಣಮಂತ್ರಾಯ ಯಕ್ಷಿಂತಿ, ನಗರಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುಸ್ತಫಾ ದರ್ಬಾನ್ ಸೇರಿದಂತೆ ಸಾರ್ವಜನಿಕರು ಆಸ್ಪತ್ರೆ ನೌಕರ ಸಿಬ್ಬಂದಿ ಇದ್ದರು.