ಪ್ರಮುಖ ಸುದ್ದಿ
ಬಸವಣ್ಣ ಜಾತಿನಾಶಕ್ಕಾಗಿ ಹೋರಾಡಿದ್ದರು, ಆದರೆ… ಸಚಿವ ಹೆಗಡೆ ಹೇಳಿದ್ದೇನು?
ದಾವಣಗೆರೆ: ವಿಶ್ವಗುರು ಬಸವಣ್ಣನವರು ಜಾತಿ ನಿರ್ಮೂಲನೆಗಾಗಿ ಹೋರಾಡಿದ್ದರು. ಆದರೆ, ಅವರ ಮಾರ್ಗದಲ್ಲಿ ನಡೆದು ಬಸವ ಅನುಯಾಯಿ ಆಗಬೇಕಿದ್ದ ಸಮುದಾಯವೇ ಇಂದು ಒಂದು ಜಾತಿ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಜಗಳೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಅಂದರೆ ಕೇವಲ ರಾಜ ಮಹಾರಾಜರ ಇತಿಹಾಸ ಇರುವ ದೇಶ ಮಾತ್ರವಲ್ಲ. ಭಾರತಕ್ಕೆ ಸಂತರ, ದಾರ್ಶನಿಕರ ಇತಿಹಾಸವಿದೆ. ಅದೇ ಕಾರಣಕ್ಕೆ ನಾನು ಕಾವಿಧಾರಿಗಳನ್ನು ಗೌರವಿಸುತ್ತೇನೆ ಎಂದು ಸಚಿವ ಅನಂತಕುಮಾರ ಹೆಗಡೆ ಪುನರುಚ್ಚರಿಸಿದರು.