ಪ್ರಮುಖ ಸುದ್ದಿ
ಬಿಜೆಪಿ ಯಾತ್ರೇಲಿ ಜನಸಾಗರ ನೋಡಿದ್ರೆ ಸಿದ್ದಣ್ಣ ಮನೆಗೆ ಹೋಗೋದು ಗ್ಯಾರಂಟಿ!
ಗುಂಡಿನ ಸಿದ್ದಣ್ಣ ಬೇಡ, ಗಂಡೆದೆಯ ಯಡಿಯೂರಪ್ಪ ಬೇಕು -ಹೆಗ್ಡೆ
ಬಾಗಲಕೋಟೆ: ಬಿಜೆಪಿ ಆಯೋಜಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಎಲ್ಲಿ ನೋಡಿದರೂ ಜನ ಸಾಗರವೇ ಸೇರುತ್ತಿದೆ. ಈ ಜನಸಾಗರ ನೋಡಿದರೆ ಸಿದ್ದಣ್ಣ ಮನೆಗೆ ಹೋಗೋದು ಗ್ಯಾರಂಟಿ ಆಗುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಾಪುರ ಪಟ್ಟಣದಲ್ಲಿ ನಡೆದ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಿಎಂ ಸಿದ್ಧರಾಮಯ್ಯ ಕೆಲ ಎಡಬಿಡಂಗಿ ಸಾಹಿತಿಗಳನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ಛೂ ಬಿಡುವ ಮೂಲಕ ರಾಜಕಾರಣ ಮಾಡಲು ಮುಂದಾಗಿದ್ದಾರೆ. ನೇರವಾಗಿ ಬಂದು ರಾಜಕಾರಣ ಮಾಡುವ ಮುಖವಿಲ್ಲದೆ ಸಾಹಿತಿಗಳನ್ನು ಜೊತೆಗಿಟ್ಟುಕೊಂಡಿದ್ದಾರೆ ಎಂದು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ನಮಗೆ ಗುಂಡಿನ ಸಿದ್ದಣ್ಣ ಬೇಡ, ಗಂಡೆದೆಯ ಯಡಿಯೂರಪ್ಪ ಬೇಕು ಎಂದಿದ್ದಾರೆ.