ಇಡಿ ಪ್ರಪಂಚ ಭಾರತವನ್ನ ಹೊಗಳುತ್ತಿದೆ- ಮೋದಿ
ಮೋದಿ “ಕೊರೊನಾ” ಮನ್ ಕಿ ಬಾತ್
ವಿವಿಡೆಸ್ಕ್ಃ ದೇಶದ ಪ್ರತಿಯೊಬ್ಬರು ಕೊರೊನಾ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ವೈದ್ಯರು, ನರ್ಸ್ ಕೊರೊನಾ ವಾರಿಯರ್ಸ್ ಅವರ ಸೇವೆ ಅನನ್ಯ. ನಾವೆಲ್ಲ ಅವರನ್ನು ಗೌರವಿಸಬೇಕು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದರೆ ಸಹಿಸಲ್ಲ. ಪೊಲೀಸರ ಸೇವೆಯು ಹೋರಾಟದ ಮುಂಚೂಣಿಯಲ್ಲಿದೆ. ಅವರ ಮಾತನ್ನು ಕೇಳಿ. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಯನ್ನು ಕೈಗೊಳ್ಳಲಾಗಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಇಡಿ ವಿಶ್ವದಲ್ಲಿ ಭಾರತ ಮಾದರಿ ಎನಿಸಿದೆ. ಇಂಥಹ ಸಂದಿಗ್ಧ ಸ್ಥಿತಿಯಲ್ಲು ಅನ್ಯದೇಶಗಳಿಗೂ ಸಹಾಯ ಹಸ್ತ ಚಾಚಿದೆ. ಹಲವು ಸಾಮಾಗ್ರಿಗಳನ್ನು ಅಗತ್ಯ ವಸ್ತುಗಳನ್ನು ವಿದೇಶಗಳಿಗೆ ಭಾರತ ಪೂರೈಸಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವದು ನಮ್ಮ ಕರ್ತವ್ಯ.
ಭಾರತವನ್ನು ಇಡಿ ಪ್ರಪಂಚ ಹಾಡಿ ಹೊಗಳುತ್ತಿದೆ. ಸಂಕಟ ಸ್ಥಿತಿಯಲ್ಲ ಜನರ ಸಂಕಲ್ಪ ಶಕ್ತಿ ತಿಳಿಯಲಿದೆ. ವಿದೇಶಕ್ಕೆ ನಾವು ಮಾಡಿದ ಸಹಾಯದಿಂದ ವಿದೇಶದವರು ತ್ಯಾಂಕ್ಯು ಇಂಡಿಯಾ ಎಂದು ಹೇಳುತ್ತಿದ್ದಾರೆ. ನಾವು ವಿದೇಶಗಳಿಗೆ ಇಂತಹ ಸಂದರ್ಭ ಸಹಾಯ ಹಸ್ತ ಚಾಚಿರುವದರಿಂದ ಅವರು ತ್ಯಾಂಕ್ಯು ಇಂಡಿಯಾ ಎಂದು ಹೇಳುತ್ತಿರುವದು.
ಮಾಸ್ಕ್ ಧರಿಸುವದರಿಂದ ಕೊರೊನಾ ತಡೆಯಬಹುದು. ದಯವಿಟ್ಟು ಮಾಸ್ಕ್ ಧರಿಸಿ. ಮಾಸ್ಕ್ ನಿಂದ ಕೊರೊನಾದಿಂದ ಬಚಾವ್ ಆಗಬಹುದು. ಯಾವುದೇ ಕಾರಣಕ್ಕು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ.
ಇಂಥಹ ಕೆಟ್ಟ ಪದ್ಧತಿ ಬಿಟ್ಟುಬಿಡಿ. ಸರ್ಕಾರದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ ಕೊರೊನಾ ಓಡಿಸಲು ಸಹಕರಿಸಿ. ಇಂದು ಅಕ್ಷಯ ತೃತೀಯ ಜೈನ್ ಪರಂಪರೆಯಲ್ಲಿ ಇಂದು ಅಕ್ಷಯ ತೃತೀಯ ಮಹತ್ವವಿದೆ. ಪರಿಸರದ ಕಾಳಜಿವಹಿಸಿ.
ಇಂದು ಬಸವೇಶ್ವರರ ಜಯಂತಿ ಇದೆ. ಬಸವೇಶ್ವರರ ಅನುಯಾಯಿಗಳಿಗೆ ಶುಭಕಾಮನೆಗಳನ್ನು ತಿಳಿಸಿದ ಅವರು, ಅಲ್ಲದೆ ರಂಜಾನ್ ಪವಿತ್ರ ಹಬ್ಬವು ಆರಂಭವಾಗಿದೆ. ಪರಿಸರ ಬಗ್ಗೆ ನಾವೆಲ್ಲ ಕಾಳಜಿವಹಿಸಿದ್ದಲ್ಲಿ ಅದು ನಮ್ಮ ಕಾಳಜಿವಹಿಸಲಿದೆ. ಭೂಮಿ ಇದ್ರೆ ನಾವು ಬದುಕುವುದು ಎಂಬುದನ್ನು ಅರ್ಥೈಸಿಕೊಂಡು ನಡೆಯಬೇಕು.
ಕಷ್ಟದ ಸಮಯದಲ್ಲಿ ಬಸವಣ್ಣನವರ ಮಾತುಗಳು ನಮಗೆಲ್ಲ ಮಾದರಿ. ಇಡಿ ದೇಶವೇ ಇಂದು ಬಸವಣ್ಣನ ನೆನೆಯುತ್ತದೆ. ಮಾಸ್ಕ್ ಸಭ್ಯಸ್ಥರ ಸಂಕೇತವಾಗಿ ಬಿಟ್ಟಿದೆ. ಕೊರೊನಾ ಬಗ್ಗೆ ನಿರ್ಲಕ್ಷ ಬೇಡ. ನಮ್ಮ ಹಳ್ಳಿಗೆ ಕೊರೊನಾ ಬರುವದಿಲ್ಲ ಎಂಬ ನಿರ್ಲಕ್ಷ ಬೇಡ. ದಯವಿಟ್ಟು ಎಚ್ಚರಿಕೆವಹಿಸಿ ಎಂದು ತಿಳಿಸಿದರು.