ಪ್ರಮುಖ ಸುದ್ದಿ
ಬಿಜೆಪಿ ಮಾಧ್ಯಮ ಪರವಾಗಿಯೇ ಇದೆ-ಸಿಟಿ ರವಿ
ಸ್ಪೀಕರ್ ಆದೇಶದ ಬಗ್ಗೆ ಚರ್ಚೆ ನಡೆಸಹುದು ಪ್ರಶ್ನಿಸಲು ಆಗಲ್ಲ-ರವಿ
ಬೆಂಗಳೂರಃ ಮಾಧ್ಯಮದವರನ್ನು ಹೊರಗಿಟ್ಟು ಅಧಿವೇಶನ ನಡೆಸಲಾಗುತ್ತಿದೆ ಎಂಬ ಆರೋಪ ಬಿಜೆಪಿ ಮೇಲೆ ಹೊರಿಸುವದು ಸರಿಯಲ್ಲ. ಅದು ಸ್ಪೀಕರ್ ಅವರ ವ್ಯಾಪ್ತಿಗೆ ಬರುವ ಆದೇಶ. ಅದನ್ನು ನಾವು ಪ್ರಶ್ನಿಸಲು ಬರಲ್ಲ. ಆ ಕುರಿತು ಚರ್ಚಿಸಬಹುದು ಎಂದು ಸಚಿವ ಸಿಟಿ ರವಿ ತಿಳಿಸಿದರು.
ವಿಧಾನಸೌಧ ಹೊರಗಡೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾವು ಬಿಜೆಪಿಯವರು ಯಾವಾಗಲು ಮಾಧ್ಯಮದ ಪರವಾಗಿದ್ದೇವೆ. ಸ್ಪೀಕರ್ ಅವರು ಅಧಿವೇಶನಕ್ಕೆ ಮಾಧ್ಯಮ ಎಂಟ್ರಿ ನಿರಾಕರಿಸಿ ಆದೇಶಿಸಿರುವದು ಯಾವ ಕಾರಣಕ್ಕೆ ಎಂಬುದು ಸ್ಪೀಕರ್ ಅವರಿಗೆ ಬಿಟ್ಟ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.