ಪ್ರಮುಖ ಸುದ್ದಿ
ಕಲಬುರಗಿಯಲ್ಲಿ ಪೊಲೀಸರಿಂದ ಫೈರಿಂಗ್ !
ಕಲಬುರಗಿ: ಕುಖ್ಯಾತ ದರೋಡೆಕೋರ ಅರ್ಜುನ್ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರು ಬಳಿ ನಡೆದಿದೆ. ದರೋಡೆ ಹಾಗೂ ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರ್ಜುನ್ ಬಂಧನಕ್ಕೆ ಜಾಲ ಬೀಸಿದ್ದರು. ಆದರೆ, ಗೊಬ್ಬೂರು ಸಮೀಪ ಎಎಸ್ಪಿ ಲೊಕೇಶ ನೇತೃತ್ವದ ತಂಡ ಬಂಧನಕ್ಕೆ ತೆರಳಿದಾಗ ಆರೋಪಿ ಅರ್ಜುನ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.
ಪರಿಣಾಮ ಮಹಾಗಾಂವ್ ಪಿಎಸ್ಐ ಪ್ರದೀಪ, ಎಎಸ್ಐ ಶಿವಪ್ಪ ಗಾಯಗೊಂಡಿದ್ದಾರೆ. ಹೀಗಾಗಿ, ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಅರ್ಜುನ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಅಫಜಲಪುರ ತಾಲೂಕಿನ ಹೊಳೆ ಭೋಸಗಾ ಗ್ರಾಮ ಮೂಲದ ಆರೋಪಿ ಅರ್ಜುನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂರು ಕಂಟ್ರಿ ಪಿಸ್ತೂಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.