ಪ್ರಮುಖ ಸುದ್ದಿ

ಗಣೇಶ ಹಬ್ಬಃ ನೂರೆಂಟು ವಿಘ್ನ ಮಧ್ಯೆ ಡಿಜೆ ಸಂಭ್ರಮ – ಕರಣ ಸುಬೇದಾರ

ಹಿಂದೂ ಮಹಾ ಗಣಪತಿಃ ಶೋಭಾಯಾತ್ರೆ

ಗಣೇಶ ಹಬ್ಬಃ ನೂರೆಂಟು ವಿಘ್ನ ಮಧ್ಯೆ ಡಿಜೆ ಸಂಭ್ರಮ – ಕರಣ ಸುಬೇದಾರ

ವಿನಯವಾಣಿ
Yadgiri, ಶಹಾಪುರಃ ನಗರದಲ್ಲಿ ಕಳೆದ ಮೂರು ನಾಲ್ಕು ವರ್ಷದಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸುತ್ತಾ ಬಂದಿದ್ದು, ಈ ಬಾರಿ ಡಿಜೆ ಬಳಕೆಗೆ ಅವಕಾಶ ನೀಡುವದಿಲ್ಲ ಪ್ರಕರಣ ದಾಖಲು ಮಾಡುತ್ತೇವೆ ಎಂದು ಸಾಕಷ್ಟು ಬಾರಿ ಪೊಲೀಸ್ ಅಧಿಕಾರಿಗಳು ನಮ್ಮನ್ನೆಲ್ಲ ಕರೆದು ಎಚ್ಚರಿಸಿದ್ದರು. ಆದಾಗ್ಯೂ ನಾವು ಡಿಜೆ ಬಳಕೆಗೆ ಯಾಕೆ ಅವಕಾಶವಿಲ್ಲ ಬೇರಡೆ ಅವಕಾಶ ಕಲ್ಪಿಸಿದ ಉದಾಹರಣೆಗಳನ್ನು ನೀಡಿದರೂ, ಯಾವ ಕಾರಣಕ್ಕೂ ಡಿಜೆ ಬಳಸುವಂತಿಲ್ಲ ಎಂದು ಸಾಕಷ್ಡು ಭಯ ಉಂಟು ಮಾಡಿದ್ದರೆಂದು ಹಿಂದೂ ಮಹಾ ಗಣಪತಿ ರೂವಾರಿ,‌ಬಿಜೆಪಿ ಮುಖಂಡ ಕರಣ ಸುಬೇದಾರ ತಿಳಿಸಿದರು.

ವಿಘ್ನನಿವಾರಕನ ಹಬ್ಬಕ್ಕೆ ನೂರೆಂಟು ವಿಘ್ನಗಳು ಎದುರಿಸುವ ಮೂಲಕ ಅಂತಿಮವಾಗಿ ಡಿಜೆ ಸೌಂಡಲ್ಲಿ ಹೆಜ್ಜೆ ಹಾಕಿ ಯುವ ಸಮೂಹ ಸಂಭ್ರಮಿಸಿತು.

ಆದರೆ ಗಣೇಶ ಪ್ರತಿಷ್ಠಾಪಿತ ದಿನದಿಂದ ವಿಸರ್ಜನಾ ಮೆರವಣಿಗೆ‌ ಮುಗಿಯುವವರೆಗೆ ನಾನಾ ವಿಘ್ನಗಳು ಪೊಲೀಸರಿಂದ ಎದುರಿಸಬೇಕಾಯಿತು. ಪಿಐ, ಎಸ್ಪಿ ಸೇರಿದಂತೆ ಹಲವರ ಜತೆ ಮಾತಾಡಿ ಅವಕಾಶ ಕಲ್ಪಿಸಲು ಬೇಡಿಕೆ ಇಟ್ಟಿದ್ದೇವು.

ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಸಿದರೂ ನಾವ್ಯಾರು ಬಗ್ಗಲಿಲ್ಲ. ಅಂತಹ ತಪ್ಪು ಮಾಡುತ್ತಿರುವದಾದರೂ ಏನು ಎಂದು ಪ್ರಶ್ನೆ ಮೂಡಿತ್ತು. ಹಾಗೇ ಧೈರ್ಯಂ ಸರ್ವತ್ತ ಸಾಧನಂ ಎಂದು ಗಣೇಶನ ಮೇಲೆ ಭಾರ ಹಾಕಿ ಮುಂದಡಿ  ಇಟ್ಟೇವು.

ಕೊನೆಗಳಿಗೆಯಲ್ಲಿ ಬಸವೇಶ್ವರ ವೃತ್ತದವರೆಗೆ ಮಾತ್ರ ಡಿಜೆ ಬಳಸಿ ಅಂದ್ರು, ಆ‌ ಮೇಲೆ ಡಿಜೆಯ ಶಬ್ಧದ ಪ್ರಮಾಣ ಕಡಿಮೆ ಮಾಡಿಸಲು ಯತ್ನಿಸಿದರು, ಮೇಲಿನ ಎರಡು ಸೌಂಡ್ ಸಿಸ್ಟಮ್ ಆಫ್ ಮಾಡಲೇಳಿದರೂ, ಕೊನೆಗೆ ಮೋಚಿಗಡ್ಡಾವರೆಗೆ ಡಿಜೆ ಅವಕಾಶ ಕಲ್ಪಿಸಿದರು. ಆದರೆ ಅಲ್ಲಿಂದ ಗಾಂಧಿ ವೃತ್ತ,‌ ದಿಗ್ಗಿ ಬೇಸ್ ಮಾರ್ಗದಿ ಮೂಲಕ ಗಣೇಶ ಮೌನವಾಗಿ ವಿಸರ್ಜನಾ ಸ್ಥಳವಾದ ನಾಗರ ಕೆರೆ ತಲುಪುವಂತಾಯಿತು. ಮುಂದಿನ ಬಾರಿ ಪರಿಪೂರ್ಣ ಶೋಭಾಯಾತ್ರೆಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡ ಅವರು, ಹಿಂದೂ ಮಹಾ ಗಣಪತಿ ಹಿಂದೂ ಮಹಾ ಸಮಾಜದ ಸಾಂಸ್ಕೃತಿಕ ಪ್ರತೀಕವಾಗಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಬಾರಿಯೂ ಯಶಸ್ವಿ ಆಚರಣೆಗೆ ಸಹಕರಿಸಿದ ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. 15 ದಿವಸಗಳ ಕಾಲ ರಾತ್ರಿ ಹಗಲು ಗಣೇಶ ಉತ್ಸವದಲ್ಲಿ ಶ್ರಮಿಸಿ ಯುವ ಸಮೂಹ ಸೇರಿದಂತೆ ತನುಮನಧನ ದಿಂದ ಸಹಕರಿಸಿದ ಎಲ್ಲರಿಗೂ ಹಾಗೂ ಪೊಲೀಸ್ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸುವೆ ಎಂದರು. ಶ್ರೀರಾಮ ಸೇನೆಯ ಶಿವಕುಮಾರ ಶಿರವಾಳ ಹಾಗೂ ಅವರ ತಂಡ ಅವಿರತ ಶ್ರಮದಿಂದ, ಹಿರಿಯರ ಮಾರ್ಗದರ್ಶನ ಸಹಭಾಗಿತ್ವದಿಂದ ಸರ್ವರ ಸಹಕಾರದಿಂದ ಹಿಂದೂ ಮಹಾ ಗಣೇಶೋತ್ಸವ ಯಶಸ್ವಿಯಾಗಿಸಿದ್ದಕ್ಕೆ ಎಲ್ಲರಿಗೂ ಆಯೋಜಕರ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.

Related Articles

Leave a Reply

Your email address will not be published. Required fields are marked *

Back to top button