ಹಿಂದೂಗಳ ಹತ್ಯೆ ಖಂಡಿಸಿ ಪ್ರತಿಭಟನೆ ಆರೋಪಿಗಳ ಬಂಧನಕ್ಕೆ ಆಗ್ರಹ
ಹಿಂದೂ ಮುಖಂಡರ ಸರಣಿ ಹತ್ಯೆ ಹಿಂದೂಪರ ಸಂಘಟನೆಗಳ ಆಕ್ರೋಶ
ಶಹಾಪುರಃ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ಖಂಡಿಸಿ ಮತ್ತು ಕೊಲೆಗಡುಕ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಇಲ್ಲಿನ ಹಿಂದೂ ಹಿತ ರಕ್ಷಣಾ ವೇದಿಕೆ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಭೀಮಣ್ಣ ಮೇಟಿ, ಕಳೆದ ನಾಲ್ಕುವರೆ ವರ್ಷದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಯ 20 ಕ್ಕೂ ಹೆಚ್ಚು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸರಣಿ ಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದ್ದು, ಆರೋಪಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದಲ್ಲಿ ನಿರಂತರ ಹಿಂದೂಪರ ಸಂಘಟನಾಕಾರರ ಕೊಲೆಯಾಗುತಿದ್ದು, ಸರ್ಕಾರ ತಮ್ ಜವಬ್ದಾರಿ ಇಲ್ಲವೆಂಬಂತೆ ವರ್ತಿಸುತ್ತಿದೆ. ಕೊಲೆಗಡುಕರ ಪರ ಮೃಧು ಧೋರಣೆ ತೋರುವ ಮೂಲಕ ರಾಜ್ಯದಲ್ಲಿ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮ, ಜಾತಿ ಜಾತಿಗಳ ನಡುವೆ ಸಂಘರ್ಷ ಅಲ್ಲದೆ ಹಿಂದೂಪರ ಮುಖಂಡರ ಸರಣಿ ಹತ್ಯೆಗಳಿಗೆ ಮುಖ್ಯಮಂತ್ರಿ ಸಿದ್ರಾಮಯ್ಯನವರೇ ಕಾರಣವೆಂದು ದೂರಿದರು. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಮೀನುಗಾರ ಕುಟುಂಬಕ್ಕೆ ಸೇರಿದ ಪರೇಶ್ ಮೇಸ್ತ ಅವರನ್ನು ಮತೀಯ ಶಕ್ತಿಗಳು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನ ಶಿವಾಜಿ ನಗರದ ಬಿಜೆಪಿಯ ರುದ್ರೇಶ್, ಮಡಿಕೇರಿಯ ಕುಟ್ಟಪ್ಪ, ಶೀವಮೊಗ್ಗದ ವಿಶ್ವನಾಥ್, ಮೈಸೂರಿನ ರಾಜು, ಮೂಡಬಿದರೆಯ ಪ್ರಶಾಂತ್ ಪೂಜಾರಿ, ಧಾರವಾಡದ ಯೋಗೇಶ ಗೌಡರ್, ಬಂಟ್ವಾಳದ ಶರತ್ ಮಡಿವಾಳ್ ಸೇರಿದಂತೆ ಪಟ್ಟಿ ಬೆಳೆಯುತ್ತಲಿದೆ ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರನ್ನು ಸರ್ಕಾರ ರಕ್ಷಿಸುತ್ತಿದೆ. ಇಲ್ಲವಾದಲ್ಲಿ ಆರೋಪಿತರನ್ನು ಏಕೆ ಬಂಧಿಸುತ್ತಿಲ್ಲವೆಂದು ಪ್ರಶ್ನಿಸಿದರು.
ಅಲ್ಲದೆ ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಐಎಸ್ಐಎಸ್, ಇಂಡಿಯನ್ ಮುಜಾಹೀದ್, ಕೆಡಿಎಫ್, ಪಿಎಫ್ಐ ಸೇರಿದಂತೆ ಎಸ್ಡಿಪಿಐ ಯಂತಹ ಮತೀಯ ಸಂಘಟನೆಗಳ ಕೈವಾಡವಿದೆ.
ಕೂಡಲೇ ಘನವೆತ್ತ ರಾಜ್ಯಪಾಲರು ಸಿದ್ರಾಮಯ್ಯನವರ ಸರ್ಕಾರಕ್ಕೆ ಕೊಲೆಗಡುಕ ಆರೋಪಿತರನ್ನು ಬಂಧಿಸುವಂತೆ ಸೂಚಿಸಬೇಕು. ಅಮಾಯಕರಿಗೆ ರಕ್ಷಣೆ ನೀಡುವಂತೆ ಬುದ್ಧೀ ಹೇಳಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಇನ್ನೆಷ್ಟು ಜೀವ ನುಂಗುತ್ತಾರೆಂಬುದು ಗೊತ್ತಿಲ್ಲ. ಆರೋಪಿತರನ್ನು ಬಂಧಿಸುವಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಕೂಡಲೇ ಹಿಂದೂಪರ ಸಂಘಟನಾಕಾರರ ಹತ್ಯೆ ಬಗ್ಗೆ ತೀವ್ರ ತನಿಖೆ ನಡೆಯಬೇಕು. ಆರೀಪಿತರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳುವ ಮೂಲಕ ಹಿಂದೂಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ, ಗುರು ಕಾಮಾ, ಸುಧೀರ ಚಿಂಚೋಳಿ, ಉಮೇಶ ಬಾಗೇವಾಡಿ, ಅಬದುಲ್ ಹಾದಿಮನಿ, ಅರವಿಂದ ಉಪ್ಪಿನ್, ಕರಬಸಪ್ಪ ಬಿರಾಳ, ಸುಭಾಶ ತಳವಾರ, ಅವಿನಾಶ ಗುತ್ತೇದಾರ, ಮಲ್ಲು ಜಾಕಾ, ಸತೀಶ ಪಂಚಬಾವಿ, ನಸಬವರಾಜ ಮಹಲ್ ರೋಜಾ, ಹಣಮಂತ ಹುಲಕಲ್, ರಾಘವೇಂದ್ರ ಯಕ್ಷಿಂತಿ,ನಾಗರಾಜ ಆವಂಟಿ ಬಸವರಾಜಫಿರಂಗಿ ಸೇರಿದಂತೆ ಇತರರು ಭಾಗವಹಿಸಿದ್ದರು.