ಪ್ರಮುಖ ಸುದ್ದಿ
ಭಾರತ ಹಿಂದೂ ರಾಷ್ಟ್ರವೇ ಮತ್ತದಕ್ಕೆ ಹೊಸದಾಗಿ ಹಿಂದೂ ರಾಷ್ಟ್ರಮಾಡಬೇಕಿಲ್ಲ – ಕುಮಾರಸ್ವಾಮಿ
ಬಿಡದಿಃ ಭಾರತ ಹಿಂದೂ ರಾಷ್ಟ್ರ ಎಲ್ಲರಿಗೂ ಗೊತ್ತಿದೆ. ಹೊಸದಾಗಿ ನಮ್ಮ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಿಲ್ಲ. ಬಿಜೆಪಿಯವರು ಹೊಸದಾಗಿ ಹಿಂದೂ ರಾಷ್ಟ್ರ ಮಾಡಲು ಹೊರಟಂತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕಿಲ್ಲ. ಭಾರತ ಹಿಂದೂ ರಾಷ್ಟ್ರವೇ ಇದೆ. ಆದರೆ ಬಿಜೆಪಿ ಒಂದಡೆ ಟ್ರಂಪ್ ಕರೆದುಕೊಂಡು ಬಂದು ಗುಜರಾತ್ನಲ್ಲಿ ಅದ್ದೂರಿ ಸ್ವಾಗತ ಮೆರವಣಿಗೆ ಮಾಡ್ತರೆ, ಇನ್ನೊಂದಡೆ ದೆಹಲಿಯಲ್ಲಿ ಗಲಭೆಯೂ ನಡೆಯುತ್ತೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಜನ ಇದನ್ನೆಲ್ಲ ಗಮನಿಸಿದ್ದಾರೆ ಕಾಲಕ್ರಮೇಣ ಬದಲಾದಂತೆ ಜನ ಅರ್ಥೈಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.