ಪ್ರಮುಖ ಸುದ್ದಿ
ಹಿಟ್ & ರನ್ : ಇಬ್ಬರು ಬೈಕ್ ಸವಾರರು ಸಾವು
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಗ್ರಾಮದ ಬಳಿ ಬೈಕಿಗೆ ಡಿಕ್ಕಿ ಹೊಡೆದ ವಾಹನವೊಂದು ಎಸ್ಕೇಪ್ ಆಗಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ ಘಟನೆ ನಡೆದಿದೆ. ಮೃತರನ್ನು ಸಿಂದಗಿ ಪಟ್ಟಣದ ಗೋಲಿಬಾರ್ ಮಡ್ಡಿ ಬಡಾವಣೆಯ ಸಲೀಮ್ ಗೋಲಗೇರಿ (18) ಹಾಗೂ ನಾಗು ಕಲಕೇರಿ (17) ಎಂದು ಗುರುತಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನಿನ್ನೆ ತಡರಾತ್ರಿ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಬೈಕಿಗೆ ಡಿಕ್ಕಿ ಹೊಡೆದ ನಂತರ ವಾಹನ ಚಾಲಕ ಬೈಕ್ ಸವಾರರಿಗೆ ಏನಾಗಿದೆ ಎಂಬುದನ್ನು ನೋಡಿ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿಲ್ಲ. ಬದಲಾಗಿ ಮಾನವೀಯತೆ ಮರೆತು ವಾಹನ ಸಮೇತ ಎಸ್ಕೇಪ್ ಆಗಿದ್ದಾನೆ. ಕೊನೆ ಪಕ್ಷ 108 ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದರೆ ಇಬ್ಬರ ಜೀವ ಉಳಿಸಬಹುದಿತ್ತು ಎಂದು ಮೃತರ ಸಂಭಂಧಿಕರು ಹಿಟ್ ಅಂಡ್ ರನ್ ಆಗಿರುವ ಚಾಲಕನಿಗೆ ಹಿಡಿ ಶಾಪ ಹಾಕಿದ್ದಾರೆ.