ಪ್ರಮುಖ ಸುದ್ದಿ

ಹೈಟೆಕ್ ಗ್ರಂಥಾಲಯ ಕಟ್ಟಡಕ್ಕೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣರಿಂದ ಅಡಿಗಲ್ಲು

ಹೈಟೆಕ್ ಗ್ರಂಥಾಲಯ ಕಟ್ಟಡಕ್ಕೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣರಿಂದ ಅಡಿಗಲ್ಲು

ಯಾದಗಿರಿಃ ರಾಜ್ಯ ಪಶುಸಂಗೋಪನೆ, ವಕ್ಫ್, ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ನಗರದಲ್ಲಿ ನೂತನ ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಶುಕ್ರವಾರ ಭೂಮಿ ಪೂಜೆ  ನೆರವೇರಿಸಿದರು.

ನಗರದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಉದೋಗಾಕಾಂಕ್ಷಿಗಳಿಗೆ ಬಹುದಿನಗಳ ಬೇಡಿಕೆಯನ್ನು ಯಾದಗಿರಿ ಜಿಲ್ಲಾಡಳಿತ ಹಾಗೂ  ಸಚಿವರು ಕೆ.ಕೆ.ಆರ್.ಡಿ.ಬಿ.ಯೋಜನೆಯಡಿ ರೂ.170 ಲಕ್ಷ ರೂ ಅನುದಾನ ಒದಗಿಸಿ ರೂರಲ್ ಪೊಲೀಸ್ ಠಾಣೆ ರಸ್ತೆಯ ವಿಶ್ವರಾಧ್ಯ ನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ನಿವೇಶನದಲ್ಲಿ ಇಂದು ಹೈಟೆಕ್ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಗ್ರಂಥಾಲಯವು ಡಿಜಿಟಲೀಕರಣವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ವಿಭಾಗಗಳನ್ನು ಹೊಂದಿರುತ್ತವೆ.

ಈಗಾಗಲೇ ಯಾದಗಿರಿ ಜಿಲ್ಲೆಯ 7 ಡಿಜಿಟಲ್ ಗ್ರಂಥಾಲಯಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ಸುಮಾರು 8000 ಜನ ನೋಂದಣಿಯಾಗಿ ಮನೆಯಿಂದಲೇ ಕಂಪ್ಯೂಟರ್, ಟ್ಯಾಬ್, ಮೊಬೈಲ್ ಮೂಲಕ ಗ್ರಂಥಾಲಯದ ಉಪಯೋಗ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ ಕೂರ್ಮರಾವ್‍ರವರ ದೂರದೃಷ್ಟಿಯಿಂದ ಕೆ.ಕೆ.ಆರ್.ಡಿ.ಬಿ.ಯೋಜನೆಯಲ್ಲಿ ಶಹಾಪುರದಲ್ಲಿ 95 ಲಕ್ಷ ರೂ, ಗುರುಮಠಕಲ್‍ನಲ್ಲಿ 95 ಲಕ್ಷ, ಹುಣಸಗಿಯಲ್ಲಿ 55 ಲಕ್ಷ , ಸುರಪುರದಲ್ಲಿ 50 ಲಕ್ಷ ರೂ ಅನುದಾನದಲ್ಲಿ ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ ತಲಾ 25 ಲಕ್ಷ ರೂ ವೆಚ್ಚದಲ್ಲಿ ವಾಗಣಗೇರಾ, ಅಬ್ಬೆತುಮಕೂರು, ಕಾಮನಟಗಿ, ಮಾಧ್ವಾರ, ಗೆದ್ದಲಮರಿ, ದೇವತ್ಕಲ್, ಮುದನೂರು, ಕೊಡೇಕಲ್, ಹೆಬ್ಬಾಳ(ಬಿ), ಕಂದಕೂರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರೆಬಿನಾಳ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರಬಿನಾಳ, ಗ್ರಂಥಪಾಲಕ ಪರಮೇಶ್ವರ ಮದರಗಿ, ಗ್ರಂಥಾಲಯ ಸಹಾಯಕ ಪಾಟೀಲ ಬಸನಗೌಡ, ಎಂ.ಎನ್.ಪಟೇಲ್, ಗೌತಮ್ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button