ಪ್ರಮುಖ ಸುದ್ದಿ
HDK ಗೆ ತಲೆ ಕೆಟ್ಟಿದೆ ಎಂದು BSY ಅಂದಿದ್ದೇಕೆ.?
ಮಂಗಳೂರ ಫೈರಿಂಗ್ ಪ್ರಕರಣ ತನಿಖೆಗೆ ಆದೇಶ
ಶಿವಮೊಗ್ಗಃ ಮಂಗಳೂರ ಫೈರಿಂಗ್ ಗೊಂದಲಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಪೊಲೀಸ್ ಠಾಣೆಗೆ ಉದ್ವಿಘ್ನಕಾರರು ಬೆಂಕಿ ಹಚ್ಚಲು ಮುಂದಾದ ಪರಿಣಾಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಫೈರಿಂಗ್ ಬಗ್ಗೆ ಆರೋಪ ಮಾಡುವ ಕುಮಾರಸ್ವಾಮಿ ಗೃಹ ಸಚಿವರ ರಾಜೀನಾಮೆ ಕೇಳಿರುವದನ್ನು ಅಲಕ್ಷ್ಯಿಸಿದ ಅವರು, ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಎಂದು ಜರಿದರು.
ಗೋಲಿಬಾರ ಪ್ರಕರಣ ಕುರಿತು ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ತನಿಖೆ ಜತೆಗೆ ಸಿಐಡಿಗೆ ಆದೇಶ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಕೇರಳಿಗರಿಂದ ಮುಖಕ್ಕೆ ಬಟ್ಟಿಕೊಂಡು ದಾಂದಲೆ ನಡೆಸಲಾಗಿದೆ ಎಂದ ಅವರು ಇಂತಹ ಕೃತ್ಯಗಳಿಗೆ ಆಸ್ಪದ ನೀಡುವದಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.