ಪ್ರಮುಖ ಸುದ್ದಿ
ಮೂರು ಅಂತಸ್ತಿನ ಕಾಲೇಜು ಕಟ್ಟಡ ಕುಸಿತ!
ಪ್ಯಾರಾ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ; ತಪ್ಪಿದ ದುರಂತ
ವಿಜಯಪುರ: ನಗರದ ಗಂಗಾಪುರಂ ಬಡಾವಣೆಯಲ್ಲಿನ ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಕುಸಿತದಿಂದ ಉಂಟಾದ ಶಬ್ದಕ್ಕೆ ಇಡೀ ಬಡಾವಣೆ ಬೆಚ್ಚಿಬಿದ್ದಿದೆ. ಬೆಳಗಿನ ಜಾವ ಘಟನೆ ನಡೆದಿದ್ದು ಜನ ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಾರೆ. ಮೂರು ಅಂತಸ್ತಿನ ಕಾಲೇಜು ಕಟ್ಟಡ ಕುಸಿತದ ಪರಿಣಾಮ ಆಸುಪಾಸಿನ ಕೆಲ ಕಟ್ಟಡಗಳಿಗೂ ಹಾನಿ ಸಂಭವಿಸಿದೆ. ಸದ್ಯ ಬೆಳಗಿನ ಜಾವ ಏಕಾಏಕಿ ಕಟ್ಟಡ ಕುಸಿದಿದ್ದರಿಂದ ಯಾವುದೇ ಪ್ರಾಣಹಾನಿ ಆಗಿಲ್ಲ. ಕಟ್ಟಡದಲ್ಲಿ ಯಾರೊಬ್ಬರು ಇಲ್ಲದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.




