ಪ್ರಮುಖ ಸುದ್ದಿ
ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ ಬಿಜೆಪಿ ಡ್ರಾಮಾ ಕಂಪನಿ ಲೀಸ್ಟನ್ನೊಮ್ಮೆ ನೋಡಿ!
ಚಿಕ್ಕಬಳ್ಳಾಪುರ: ಬಿಜೆಪಿ ನಾಟಕ ಕಂಪನಿಗೆ ನರೇಂದ್ರ ಮೋದಿ ಮಾಲೀಕರು. ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ವ್ಯವಸ್ಥಾಪಕರು. ಕರ್ನಾಟಕ ಮತ್ತು ಗೋವಾದ ಬಿಜೆಪಿ ನಾಯಕರು ಪಾತ್ರಧಾರಿಗಳು. ಕೆಲವರು ಜೋಕರ್ ಗಳು, ಇನ್ನೂ ಕೆಲವರು ಹಿರೋಯಿನ್ಸ್ ಎಂದು ಹೇಳುವ ಮೂಲಕ ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರ ಕುಮಾರನಂತೆ ಆಗಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸುವ ಮಾತನಾಡಿ ಮಾತು ತಪ್ಪಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಮಹದಾಯಿ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನ್ಯಾಯಾಧೀಕರಣ ಅವಕಾಶ ನೀಡಿತ್ತು. ಮಾತುಕತೆ ಬೇಡವಾದರೆ ನಾವು ನ್ಯಾಯಾಧೀಕರಣದಲ್ಲೇ ನ್ಯಾಯ ಪಡೆಯುತ್ತೇವೆ ಎಂದು ತಿಳಿಸಿದರು.