ಪುಸ್ತಕಕ್ಕೆ ಮನುಷ್ಯನ ಬದುಕೆ ತಾಯಿ – ಪ್ರೊ.H.T.ಪೋತೆ
ಹೊನ್ಕಲ್ ಪ್ರತಿಷ್ಠಾನದಿಂದ 3 ಗಜಲ್ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ
yadgiri, ಶಹಾಪುರಃ ಕಲ್ಯಾಣ ಕರ್ನಾಟಕ ಪ್ರದೇಶ ವಿಶಿಷ್ಟವಾಗಿದ್ದು, ಇಲ್ಲಿ ಬೌದ್ಧ, ಜೈನ್, ಸಿಖ್ ಧರ್ಮ ಸೇರಿದಂತೆ ಹಲವಾರು ಜನ ಶರಣರು, ಸೋಫಿ ಸಂತರು ಮತ್ತು ಸತ್ಪುರುಷರು ನೆಲೆ ನಿಂತು ನಿರಂತರ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆ ನಡೆದಿರುವಂತಹ ವೈಶಿಷ್ಟ್ಯ ಹೊಂದಿರುವಂತ ಅದ್ಭುತ ನೆಲೆಬೀಡಾಗಿದೆ. ಇಂತಹ ಪ್ರದೇಶದಲ್ಲಿ ಬಹುಮುಖ ಪ್ರತಿಭೆಯ ಸಿದ್ಧರಾಮ ಹೊನ್ಕಲ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ಬಗೆಯ ಕೃಷಿ ಮಾಡಿರುವದು ಇನ್ನೂ ಹೆಮ್ಮೆ ತಂದಿದೆ ಎಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕಲಾನಿಕಾಯದ ಡೀನ್ ಪ್ರೊ.ಎಚ್.ಟಿ.ಪೋತೆ ತಿಳಿಸಿದರು.
ಇಲ್ಲಿನ ಲಕ್ಷ್ಮೀ ನಗರದ ಬಡಾವಣೆಯಲ್ಲಿ ಶ್ರೀಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವತಿಯಿಂದ ಆಯೋಜಿಸಿದ 3 ಗಜಲ್ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕಕ್ಕೆ ಮನುಷ್ಯನ ಬದುಕೆ ತಾಯಿ ಇದ್ದಂತೆ. ಬದುಕೆ ಇಲ್ಲವೆಂದಲ್ಲಿ ಪುಸ್ತಕ ಹೊರ ಬರುವದಿಲ್ಲ. ಪುಸ್ತಕ ಮನುಷ್ಯನನ್ನ ಬದಲಾಯಿಸುವದಷ್ಟೆ ಅಲ್ಲ ದೊಡ್ಡವನನ್ನಾಗಿ ಮಾಡುತ್ತದೆ. ಪುಸ್ತಕದಲ್ಲಿನ ವಿಚಾರಗಳು ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರಲಿವೆ. ಉತ್ತಮ ಪ್ರಭಾವ ಬೀರಬಲ್ಲ ಪುಸ್ತಕಗಳೇ ನಿಜವಾದ ಲೇಖಕನ ಮೆಚ್ಚುಗೆಗೆ ಪಾತ್ರವಾಗಲಿವೆ. ಡಾ.ಅಂಬೇಡ್ಕರರು ಬಾಲ್ಯದಲ್ಲಿಯೇ ಬೌದ್ಧ ಸಾಹಿತ್ಯ, ಚರಿತ್ರೆ ಓದಿದ ಹಿನ್ನೆಲೆ ಅವರ ಬದುಕು ಬಹುದೊಡ್ಡ ತಿರುವು ಪಡೆದುಕೊಳ್ಳಲು ಸಾಧ್ಯವಾಯಿತು.
ಆ ನಿಟ್ಟಿನಲ್ಲಿ ಯಾವುದೇ ಒಂದು ಕೃತಿ ಮನುಷ್ಯನ ಮೇಲೆ ಪ್ರಭಾವ ಬೀರಬಲ್ಲುದಾದರೆ ಅದು ಲೇಖನ ನಿಜ ಬರಹ ಸಾರ್ಥಕತೆ ಪಡೆದಂತೆ. ಲೇಖಕನಾದವನು ಸಮಾಜದಲ್ಲಿ ತಕ್ಕಡಿ ಇಡಿಯುವ ಕೆಲಸ ಮಾಡಬೇಕು. ಓರ್ವ ವಿಜ್ಞಾನಿ ಎರಡು ಪ್ಲಸ್ ಎರಡು ನಾಲ್ಕು ಎಂದೇ ಹೇಳಬೇಕು ವಿನಃ ಐದು ಆರು ಎಂದರೆ ಹೇಗಾದೀತು ಎಂದರು. ಕೊರೊನಾ ವೇಳೆ ಎಲ್ಲಾ ಗುಡಿ, ಮಸೀದಿ, ಚರ್ಚ್‍ಗಳು ಮುಚ್ಚಿದವು, ಆದರೆ ಕೊನೆಗೆ ಲಸಿಕೆ ತಂದು ಜನರ ಆರೋಗ್ಯ ಸುಧಾರಣೆಗೆ ಸಹಕಾರವಾಗಿದ್ದು, ಇದೇ ಪ್ರಯೋಗಾಲಯ, ಪುಸ್ತಕಾಲಯಗಳು. ಹೀಗಾಗಿ ಸಂಪ್ರದಾಯ, ಮೌಢ್ಯತೆ ಬೋಧನೆ ಮಾಡಬಾರದು. ನ್ಯಾಯ ನಿಷ್ಠೆ ಪ್ರತಿಪಾದನೆ ಮಾಡಬೇಕು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ನಾಲವಾರದ ಸಿದ್ಧತೋಟೇಂದ್ರ ಶಿವಾಚಾರ್ಯರು, ಒಂದು ಕೃತಿ ಹೊರ ತರಬೇಕಾದರೆ ಅದಕ್ಕೆ ಎಷ್ಟು ಶ್ರಮಬೇಕೆಂದರೆ ಒಂದು ಮಗು ಹೆತ್ತಷ್ಟೆ ಶ್ರಮ ಸಂತಸವು ಆಗಲಿದೆ. ಅಂತದರಲ್ಲಿ ಹೊನ್ಕಲ್‍ರು ತ್ರಿವಳಿ ಕೃತಿಗಳಿಗೆ ಜನ್ಮ ನೀಡಿರುವದು ಸಾಹಿತ್ಯ ಕ್ಷೇತ್ರದಲ್ಲಿ ಅವರಿಗಿರುವ ಪ್ರತಿಭೆ ಅಗಾಧ ಪ್ರೇಮ ಮೆಚ್ಚುವಂತಹದ್ದು ಎಂದರು.
ಪ್ರತಿಷ್ಠಾನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕಲಬುರ್ಗಿ ವಿಶ್ವವಿದ್ಯಾಲಯದ ಕುಲಪತಿ ಡಾ.ದಯಾನಂದ ಅಗಸರ, ಸಾಹಿತಿಗಳು, ಬುದ್ಧಿಜೀವಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಹೊನ್ಕಲ್ ಅವರು ಸಾಹಿತ್ಯದ ಮೂಲಕ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಆಚಾರ ವಿಚಾರಗಳ ಮಧ್ಯ ಇರುವ ಅಂತರ ಕಡಿಮೆಯಾಗಬೇಕಿದೆ. ಆಗ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ.
ಹೊನ್ಕಲ್ ಹಾಗೂ ತಾವು ಕಾಲೇಜಿನ ಓದಿನ ದಿನಗಳಲ್ಲಿ ಕೆಲಕಾಲ ಒಂದೇ ಕೋಣೆಯಲ್ಲಿ ಇದ್ದು ಓದಿರುವ ನೆನಪು ಮೆಲಕು ಹಾಕಿದರು. ಈಗ ಕುಲಪತಿಯಾದ ನನಗೆ ಹೆಚ್ಚಿನ ಜವಬ್ದಾರಿ ಇದ್ದು, ನಾಲಕು ವರ್ಷದಲ್ಲಿ ಗುಲ್ಬರ್ಗಾ ವಿವಿ ಬೆಳವಣಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಈ ಭಾಗದ ಆಶೋತ್ತರಗಳಿಗೆ ಸ್ಪಂಧಿಸುವೆ ಎಂದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ಶರಣಪ್ಪ ಹೊನ್ಕಲ್ ಸ್ಮರಣಾರ್ಥ ಸಾಹಿತ್ಯದಲ್ಲಿ ವಿವಿಧ ಪ್ರಕಾರ ಕೃಷಿ ಮಾಡಿದ ಐವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಚಬ ಸಂಸ್ಥಾನ ಬಸವಯ್ಯ ಶರಣರು ಸಾನಿದ್ಯವಹಿಸಿದ್ದರು.
ಡಾ.ಚಂದ್ರಶೇಖರ ಸುಬೇದಾರ ಸಾಧಕರಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಸತ್ಕರಿಸಿದರು. ಚಂದ್ರಶೇಖರ ಆರಬೋಳ ಅಧ್ಯಕ್ಷತೆವಹಿಸಿದ್ದರು. ಕನ್ನಡ ಅಧ್ಯಾಪಕ ಖ್ಯಾತ ಲೇಖಕ ಡಾ.ವಿಕ್ರಮ್ ವಿಸಾಜಿ ಹಾಗೂ ಖ್ಯಾತ ಲೇಖಕಿ ಹೇಮಲತಾ ವಸ್ತ್ರದ ಕೃತಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕಲಬುರ್ಗಿಯ ಹಿರಿಯ ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರ, ಯುವ ಸಾಹಿತಿ ಗಂಗಾಧರ ಬಡಿಗೇರ ಸೇರಿದಂತೆ ಗುರು ಕಾಮಾ, ರಾಜಕುಮಾರ ಚಿಲ್ಲಾಳ, ವಿಜಕುಮಾರ ಹೊನ್ಕಲ್, ಜಗಧೀಶ ಹೊನ್ಕಲ್ ಸೇರಿದಂತೆ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಮಹೇಶ ಪತ್ತಾರ ಪ್ರಾರ್ಥನೆ ಗೀತೆ ಹಾಡಿದರು. ಜ್ಯೋತಿ ತಡಿಬಿಡಿ ಮಠ ನಿರೂಪಿಸಿ ವಂದಿಸಿದರು.