ಪ್ರಮುಖ ಸುದ್ದಿ
ಆ ಜೋಡಿಯ ದರ್ಶನವಿಲ್ಲದೆ ಸಿಎಂ ಯಡಿಯೂರಪ್ಪ ದಿನಚರಿ ಅಪೂರ್ಣ!
ಬೆಂಗಳೂರು: “ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ನಡಿಗೆ ಮೂಲಕ ಮತ್ತು ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈತಡವದೆ ಅದು ಪೂರ್ಣವಾಗದು. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದು ಮುದ್ದು ಕರುಗಳೊಂದಿಗಿನ ಚಿತ್ರ ಶೇರ್ ಮಾಡಿದ್ದಾರೆ.
ಸಿಎಂ ಬಿಎಸ್ ವೈ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಟೀಕಿಸಿ ಟ್ವೀಟ್ ಮಾಡಿದ್ದಾರೆ.
ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ನಡಿಗೆ ಮೂಲಕ ಮತ್ತು ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈತಡವದೆ ಅದು ಪೂರ್ಣವಾಗದು. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ. pic.twitter.com/hbqNhDnRMd
— B.S. Yediyurappa (@BSYBJP) August 16, 2020