ಪ್ರಮುಖ ಸುದ್ದಿ
‘ಹೊನ್ನಾಳಿ ಹುಲಿ’ಗೆ ಕೊನೆಗೂ ಸಂಪುಟ ದರ್ಜೆ ಸ್ಥಾನಮಾನ!
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದ ಹಿನ್ನೆಲೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೆರಳಿದ್ದರು. ಮಾಜಿ ಶಾಸಕ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿದ್ದರ ವಿರುದ್ಧ ಸಮರ ಸಾರಿದ್ದರು. ‘ಹೊನ್ನಾಳಿ ಹುಲಿ’ ನಾನು ಸಚಿವ ಸ್ಥಾನ ಬೇಕು ಅಂದ್ರೆ ಬಿಕ್ಷೆ ಬೇಡಲ್ಲ, ಬಿಎಸ್ ವೈ ಬಳಿ ಪಟ್ಟು ಹಿಡಿಯುತ್ತೇನೆ ಎಂದು ಗುಡುಗಿದ್ದರು.
ಇಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿ ಶಾಸಕ ರೇಣುಕಾಚಾರ್ಯರನ್ನು ನೇಮಿಸಿ ಸಿಎಂ ಬಿಎಸ್ ವೈ ಆದೇಶಿಸಿದ್ದಾರೆ. ಆ ಮೂಲಕ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಸಂಪುಟ ದರ್ಜೆ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ.