ಹೊನ್ನಳ್ಳಿಯ ವೀರಘಂಟಯ್ಯ ಮಹಾಸ್ವಾಮಿ ಲಿಂಗೈಕ್ಯ
ಭಕ್ತರ ಪಾಲಿನ ಕಾಮಧೇನು ಸಹೃದಯಿ ಸ್ವಾಮೀಜಿ ಇನ್ನಿಲ್ಲ
ವಿನಯವಾಣಿ ಡೆಸ್ಕ್ಃ ಹೊನ್ನಳ್ಳಿ ಮುತ್ಯಾ ಎಂತಲೇ ಪ್ರಸಿದ್ಧ ಪಡೆದಿದ್ದ, ಸರಳ ಜೀವಿ, ಮುಗ್ಧ ಮನಸ್ಸಿನ ಸ್ಪೂರದ್ರೂಪಿಯೂ ಆದ ಭಕ್ತರ ಸಂಕಷ್ಟ ನಿವಾರಣೆಗೆ ಸದಾ ಶ್ರಮಿಸುವ ಸಹೃದಯಿ ವೀರಘಂಟಯ್ಯ ಮಹಾಸ್ವಾಮೀಗಳು ಹೊನ್ನಳ್ಳಿ ಇವರು ಹೃದಯಘಾತದಿಂದ ಜುಲೈ 19 ರಾತ್ರಿ 8 ಗಂಟೆ ಸುಮಾರಿಗೆ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ. ಶನಿವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಬರುವ ಸುಕ್ಷೇತ್ರ ಗದ್ದುಗೆ ಮಠ ಹೊನ್ನಳ್ಳಿ-ಬ್ರಹ್ಮದೇವನಮಡು ವಿಜಯಪುರ ಜಿಲ್ಲೆ ಸೇರಿದಂತೆ ಕಲಬುರ್ಗಿ, ಬೀದರ ಮತ್ತು ರಾಯಚೂರ ಜಿಲ್ಲೆಯಾದ್ಯಂತ ಜನರಿಗೆ ಸುಪರಿಚಿತ.
ಲಿಂಗೈಕ್ಯರಾದ ಪೂಜ್ಯ ಗುರುಗಳಾದ ವೀರಘಂಟಯ್ಯ ತಾತನವರು ಸರಳ ಜೀವಿ, ಸಹೃಯವಂತರು. ಕಷ್ಟವೆಂದು ಬಂದ ಭಕ್ತರ ಪಾಲಿಗೆ ಕಾಮಧೇನು.
ಸದಾ ಭಕ್ತರ ಒಳಿತಿಗಾಗಿ ಶ್ರಮಿಸಿದವರು. ಎಂತಹದ್ದೆ ಕಷ್ಟವೆಂದು ಬರುವ ಭಕ್ತರಿಗೆ ಅವರ ಮಾತು ಕೇಳಿದೊಡನೆಯೇ ಸಮಧಾನ ತರುವಂತಹದ್ದು, ಅವರ ಸರಳತೆ ಮಾರ್ಗದರ್ಶನ ಭಕ್ತರಲ್ಲಿ ನಿರಮ್ಮಳತೆಯನ್ನುಂಟು ಮಾಡುತಿತ್ತು. ಬಡವರು ಶ್ರೀಮಂತರೆನ್ನದೆ ಮತ್ತು ಜಾತಿ, ಮತ, ಧರ್ಮಗಳೆನ್ನದೆ ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದರು. ಶ್ರೀಮಠಕ್ಕೆ ಬರುವ ಭಕ್ತರೆಲ್ಲರ ಕಷ್ಟಕಾರ್ಪಣ್ಯಕ್ಕೆ ಸೂಕ್ತ ಸ್ಪಂಧನೆ ನೀಡುತ್ತಿದ್ದರು.
ಮೊದಲಿಗೆ ದಾಸೋಹ ಮಾಡಿಸಿಯೇ ನಂತರ ಭಕ್ತರನ್ನು ವಿಚಾರಿಸಿ ಸಲಹೆ ಸೂಚನೆ ನೀಡಿ ಆಶೀರ್ವಾದ ಮಾಡುತ್ತಿದ್ದರು. ಹಗಲಿರಳು ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದರು. ಇಂತಹ ದೈವಶಕ್ತಿ ನಮ್ಮಗಳ ಮಧ್ಯದಿಂದ ಹಾರಿ ಹೋಗಿದೆ ಎಂದರೆ ಅಂದರೆ ನಂಬಲಸಾಧ್ಯವಾಗುತ್ತಿದೆ.
ನಡೆ ನುಡಿಗೆ ಹೆಸರಾದ ಅವರು, ಎಂದೂ ಭಕ್ತರಲ್ಲಿ ಕೈಚಾಚಿದವರಲ್ಲ. ಭಕ್ತರಿಗೂ ಅವರ ಶುಭಾಶೀರ್ವಾದ ದೊರೆತರೆ ಸಾಕು. ಅವರಾಡುವ ಮಾತಿನಲ್ಲಿ ಅಂತಹ ಸೆಳೆತವಿತ್ತು. ಅವರ ಸರಳ ಸ್ವಾಭಿಮಾನದ ಜೀವನ ಇತರರಿಗೆ ಮಾದರಿ.
ಅವರ ಜೀವನ ಶೈಲಿಯಲ್ಲಿಯೇ ಉದಾರತೆ ಅಡಗಿತ್ತು. ಭಕ್ತರ ಬದುಕಿಗೆ ಮಾರ್ಗದರ್ಶನ ಮಾಡುವ ಗುರು ಇಲ್ಲವೆಂಬ ಸುದ್ದಿ ಕೇಳಿ ತಲೆ ಮೇಲೆ ಬರಸಿಡಿಲಿನಂತ ಬಂಡೆಯೊಂದು ಅಪ್ಪಳಿಸಿದಂತಾಗಿದೆ. ದೇವರ ತುಂಬಾ ಅನ್ಯಾಯ ಮಾಡಿದ ಎಂಬ ಮಾತುಗಳು ಭಕ್ತರಿಂದ ಕೇಳಿ ಬರುತ್ತಿವೆ.
ಅಸಂಖ್ಯಾತ ಭಕ್ತಕುಲವನ್ನು ಹೊಂದಿದ್ದ ಅವರು, ಹಠಾತ್ತನೆ ಅವರಿಲ್ಲದ ಬದುಕು ಊಹಿಸಿಕೊಳ್ಳಲು ಭಕ್ತರಿಂದ ಸಾಧ್ಯವಾಗುತ್ತಿಲ್ಲ. ಅವರ ಕುಟುಂಬಕ್ಕೆ ಮತ್ತು ಭಕ್ತ ಸಮೂಹಕ್ಕೆ ಶ್ರೀಮಠದ ಕರ್ತೃ ಗದ್ದುಗೆಯ ಒಡೆಯ ದುಖಃ ತಡೆಯುವ ಶಕ್ತಿ ನೀಡಿಲಿ ಎಂದು ವಿನಯವಾಣಿ ಪ್ರಾರ್ಥಿಸುತ್ತದೆ.
–ಮಲ್ಲಿಕಾರ್ಜುನ ಮುದನೂರ.
ಸಂಪಾದಕರು. ವಿನಯವಾಣಿ.
Swamiji athmakke chirashanti sigalendu prartisuttene