ಪ್ರಮುಖ ಸುದ್ದಿ
“ಎಲ್ಲವು ಚನ್ನಾಗಿದೆ” ಮಾತಿಗಿದೆ ಖರ್ಗೆ ಟ್ವಿಟರ್ ಟಾಂಗ್
“ಎಲ್ಲಾ ಚನ್ನಾಗಿದೆ” ಮಾತಿಗೆ ಖರ್ಗೆ ಟ್ವಿಟರ್ ಟಾಂಗ್
ಕಲಬುರಗಿಃ ಅಮೇರಿಕಾದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋಡಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು “ಎಲ್ಲಾ ಚನ್ನಾಗಿರೆ” ಎಂದು ಕನ್ನಡದಲ್ಲಿ ಹೇಳಿದ ಮಾತಿಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟರ್ ನಲ್ಲಿ ಗುಟುರು ಹಾಕಿದ್ದಾರೆ.
ಅಮೇರಿಕಾದಲ್ಲಿ ನಿಂತುಕೊಂಡ ಭಾರತದಲ್ಲಿ ಎಲ್ಲಾ ಚನ್ನಾಗಿದೆ ಎಂದು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೇಳಿದ ಮೋದಿಯವರ ಮಾತಿಗೆ ಖರ್ಗೆ ಕಿಡಿಕಾರಿದ್ದಾರೆ.
ಇಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನೆರೆ ಹಾವಳಿಗೆ ಜನ ತತ್ತರಿಸಿಹೋಗಿದ್ದಾರೆ. ಕಲ್ಯಾಣ ಕರ್ನಾಟಕದ ದಿಂದ ಒಬ್ಬರೇ ಒಬ್ಬರು ಸಚಿವರನ್ನಾಗಿ ಮಾಡದಿರುವದೇ ಎಲ್ಲಾ ಚನ್ನಾಗಿದೆ. ಅಲ್ಲದೆ ಕಲಬುರಗಿಯ ರಾಷ್ಟ್ರೀಯ ಬಂಡವಾಳ ತಯಾರಿಕಾ ವಲಯದಲ್ಲಿ ಯಾವುದೇ ಪ್ರಗತಿ ಇಲ್ಲ ಎಂದು ಟಾಂಗ್ ನೀಡಿದ್ದಾರೆ.