ಪ್ರಮುಖ ಸುದ್ದಿಬಸವಭಕ್ತಿ

ಹುಲಿಗಿ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ, ಮೇ.31 ರಥೋತ್ಸವ, ಜೂನ್ 2 ರಂದು ಪಾಯಸ ಅಗ್ನಿಕುಂಡ

ಹುಲಿಗಿ ಜಾತ್ರಾ ಮಹೋತ್ಸವ ವಿವರ

ಹುಲಿಗಿ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ, ಮೇ.31 ರಥೋತ್ಸವ, ಜೂನ್ 2 ರಂದು ಪಾಯಸ ಅಗ್ನಿಕುಂಡ

ಕೊಪ್ಪಳಃ ಜಿಲ್ಲೆಯ ಸುಪ್ರಸಿದ್ಧ ಸುಕ್ಷೇತ್ರ ಹುಲಿಗಿ ಹುಲಿಗೆಮ್ಮ ದೇವಿ ಜಾತ್ರಾಮಹೋತ್ಸವ ಇದೇ ಮೇ.30 ರಿಂದ ಜೂನ್ 3 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ವಿವರ ಇಂತಿದೆ..

ಜಾತ್ರಾ ಮಹೋತ್ಸವ ಅಂಗವಾಗಿ ವಿವಿ್ ಧಾರ್ಮಿಕ ಕಾರ್ಯಗಳು ಕೈಗೊಂಡಿದ್ದು, ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯ ನಿಮಿತ್ತ ಮೇ 30 ರಂದು ಸಂಜೆ 7 ಗಂಟೆಗೆ ಉತ್ಸವ, ಮೇ 31 ಸಂಜೆ 5-30 ಗಂಟೆಗೆ ಅಕ್ಕಿಪಡಿ ಮಹಾರಥೋತ್ಸವ ಜರುಗಲಿದೆ. ಜೂನ್ 01 ರಂದು ಬಾಳಿದಂಡಿಗೆ, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 3-30 ಗಂಟೆಗೆ (ಬ್ರಾಹ್ಮೀ ಮುಹೂರ್ತದಲ್ಲಿ) ಗಂಗಾದೇವಿ ಪೂಜಾ, ಬೆಳಗಿನ ಜಾವ 4 ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 4-30 ಕ್ಕೆ ಬಾಳಿದಂಡಿಗೆ ಆರೋಹಣ ನಡೆಯಲಿದೆ.
ಅಲ್ಲದೆ ಜೂನ್ 02 ರಂದು ಪಾಯಸ ಅಗ್ನಿಕೊಂಡ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ರಾತ್ರಿ 9 ಕ್ಕೆ ಹಿಡಿದಕ್ಷಿಣೆ ವಿತರಣೆ, 9-30 ಕ್ಕೆ ಪಡಗದ ಪೂಜಾ, ಬೆಳಗಿನ ಜಾವ 4 ಗಂಟೆಗೆ ಗಂಗಾದೇವಿ ಪೂಜಾ, ಬಳಿಕ ಅದೇ 4-30 ಗಂಟೆಗೆ ಶ್ರೀದೇವಿಗೆ ಪ್ರಸಾದ ಕಟ್ಟುವುದು, ಬೆಳಗಿನ ಜಾವ 5-30 ಗಂಟೆಗೆ ಶ್ರೀದೇವಿಗೆ ಪಾಯಸ ಪ್ರಸಾದ ನಿವೇದನೆ ಹಾಗೂ ಜೂನ್ 03 ರಂದು ಬೆಳಿಗ್ಗೆ 6-30 ಗಂಟೆಗೆ (ದ್ವಾದಶಿ ನಸುಕಿನಲ್ಲಿ) ಅಗ್ನಿಕುಂಡ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button