ಪ್ರಮುಖ ಸುದ್ದಿ
ಹುಣಸೂರ ಜಿಲ್ಲೆ ವಿಚಾರ ವಿಶ್ವನಾಥಗೆ ಕಾಂಗ್ರೆಸ್ ಪ್ರತಿಕ್ರಿಯೆ
ಮೈಸೂರಃ ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರ ನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕೆಂದು ಅನರ್ಹ ಶಾಸಕ ಎಚ್.ವಿಶ್ವನಾಥ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಡಿ.5 ರಂದು ಉಪಚುನಾವಣೆ ಘೋಷಣೆಯಾದ ಹಿನ್ನೆಲೆ ವಿಶ್ವನಾಥ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಈ ಹಿಂದೆ ಯಾಕೆ ಹುಣಸೂರ ಜಿಲ್ಲೆಯಾಗಿಸಿ ಎಂದು ಕೇಳಲಿಲ್ಲ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಉಪ ಚುನಾವಣೆ ಬಂದ ಹಿನ್ನೆಲೆ ವಿಶ್ವನಾಥ ೀ ಹುಣಸೂರ ಜಿಲ್ಲೆ ವಿಚಾರ ಅಸ್ತ್ರವನ್ನಾಗಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇದೆಲ್ಲ ವರ್ಕ್ಔಟ್ ಆಗಲ್ಲ ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.