ಪ್ರಮುಖ ಸುದ್ದಿ

ಕಾಳಜಿ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ – ಆರ್.ಅಶೋಕ

ಸಮರ್ಪಕ ಪರಿಹಾರ ಒದಗಿಸಲಿದೆ- ಆರ್.ಅಶೋಕ

yadgiri, ಶಹಾಪುರಃ ಕಾಳಜಿ ಕೇಂದ್ರದಲ್ಲಿ ಊಟದ ವ್ಯವಸ್ಥೆ ಜೊತೆಗೆ ಔಷಧೋಪಾಚಾರ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದ್ದೇನೆ. ಬೆಳೆ ಹಾನಿ ಕುರಿತು ಪರಿಹಾರಕ್ಕಾಗಿ ಕೇಂದ್ರದೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ತಾಲೂಕಿನ ನೆರೆ ಪೀಡಿತ ಪ್ರದೇಶ ಹುರಸಗುಂಡಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಭಾಗದಲ್ಲಿ ಸುಮಾರು 50 ವರ್ಷದಿಂದ ಕಾಣದ ಮಳೆ ಬಂದಿದೆ ಎಂದು ರೈತರು ಹೇಳುತ್ತಿದ್ದಾರೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣ ನೀರು ಹರಿಬಿಟ್ಟ ಹಿನ್ನೆಲೆ ನೆರೆ ಹಾವಳಿ ಹೆಚ್ಚಾಗಿದೆ. ಈ ಕುರಿತು ಅವಲೋಕಿಸಿದ್ದೇನೆ. ಸಮರ್ಪಕ ಮಾಹಿತಿ ಪಡೆದ ನಂತರ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವದು.
ಅಲ್ಲದೆ ಜಿಲ್ಲೆಯಲ್ಲಿ ನೆರೆ ನಿರ್ವಹಣೆಗಾಗಿ 12 ಕೋಟಿ ಹಣ ಇದೆ ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ಶಾಸಕ ರಾಜೂಗೌಡ ಸುರಪುರ, ರಾಯಚೂರ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ಸೇರಿದಂತೆ ಇತರರಿದ್ದರು.

ಕಾಂಗ್ರೆಸ್ ಆಡಳಿತದಲ್ಲಿ ಅನುದಾನ ತಲುಪಿಸಲಿಲ್ಲ ಆರ್.ಅಶೋಕ ಆರೋಪ
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ರಾಜ್ಯಕ್ಕೆ ಸಮರ್ಪಕವಾದ ಅನುದಾನ ನೀಡಲಿಲ್ಲ. ಈಗ ಹಿಂದೆ ಅವರು ನೀಡಿದ ಅನುದಾನಕ್ಕಿಂತ 4 ಪಟ್ಟು ಜಾಸ್ತಿ ಅನುದಾನ ನಮ್ಮ ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ.

ಅಲ್ಲದೆ ನದಿ ತೀರದಲ್ಲಿ ನೆರೆ ಹಾವಳಿಗೆ ತೊಂದರೆ ಅನುಭವಿಸುವ ಗ್ರಾಮಗಳ ಸ್ಥಳಾಂತರ ಮಾಡುವಾಗ ಆಯಾ ಕುಟುಂಬಗಳಿಗೆ ಕಡಿಮೆ ಹಣ ನೀಡಲಾಗಿದೆ. ಇದೀಗ ನಾವು 5 ಲಕ್ಷ ನೀಡುತ್ತೇವೆ ಎಂದು ಉತ್ತರಿಸಿದರು. ಹುರಸಗುಂಡಗಿ ಜನರಿಗಾಗಿ ನವ ನಗರ ನಿರ್ಮಾಣ ಮಾಡಿದ್ದು, ಜನರು ಅಲ್ಲಿಗೆ ಹೋಗದ ಕಾರಣ ಈ ತೊಂದರೆಯಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆದು ತಿಳಿಸುವೆ ಎಂದು ಉತ್ತರಿಸಿ ಜಾರಿಕೊಂಡರು.

Related Articles

Leave a Reply

Your email address will not be published. Required fields are marked *

Back to top button