ಪ್ರಮುಖ ಸುದ್ದಿ
ಎಚ್.ವಿಶ್ವನಾಥ, ಸಿ.ಪಿ.ಯೋಗೇಶ್ವರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ.!
ಬೆಂಗಳೂರಃ ಬಿಜೆಪಿ ಸರ್ಕಾರ ವಿಧಾನಪರಿಷತ್ಗೆ ಐವರು ಸದಸ್ಯರನ್ನು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
ಸಿಎಂ ಯಡಿಯೂರಪ್ಪ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಹೆಚ್.ವಿಶ್ವನಾಥ್ (ಸಾಹಿತ್ಯ), ಸಾಬಣ್ಣ ತಳವಾರ್ (ಶಿಕ್ಷಣ), ಶಾಂತಾರಾಮ ಸಿದ್ದಿ (ಬುಡಕಟ್ಟು ಜನಾಂಗ), ಭಾರತಿ ಶೆಟ್ಟಿ (ಸಮಾಜಸೇವೆ) ಹಾಗೂ ಸಿ.ಪಿ. ಯೋಗೇಶ್ವರ್ (ಸಿನಿಮಾ) ಕ್ಷೇತ್ರ ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗಿದ್ದು, ಇನ್ನೂ ಆಪರೇಶನ್ ಕದಲ್ಲಿ ಪ್ರಮುಖ ಪಾತ್ರ ವಹಿಸಿ ರಾಜ್ಯದಲ್ಲಿ ಮತ್ತೆ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದ ಸಿ.ಪಿ.ಯೋಗೇಶ್ವರ್ ಗೆ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿ ಸ್ಥಾನಮಾನ ನೀಡಲಾಗಿದೆ. ಅಂತೂ ಎಚ್.ವಿಶ್ವನಾಥ ಹಾಗೂ ಯೋಗೇಶ್ವರ ಅವರನ್ನು ಸಿ.ಎಂ.ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.