ಪ್ರಮುಖ ಸುದ್ದಿ
ನನ್ನ ಮಗ ಕ್ಷಮೆಗೆ ಅರ್ಹನಲ್ಲ ಗಲ್ಲಿಗೇರಿಸಿ ನಾವೇನು ಚಿಂತಿಸಲ್ಲ..!
ನನ್ನ ಮಗ ಕ್ಷಮೆಗೆ ಅರ್ಹನಲ್ಲ ಗಲ್ಲಿಗೇರಿಸಿ ನಾವೇನು ಚಿಂತಿಸಲ್ಲ..!
ಹೈದರಾಬಾದ್ಃ ವೈದ್ಯೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಗಲ್ಲಿಗೇರಿಸಿ ಇವರು ಕ್ಷಮೆಗೆ ಅರ್ಹರಲ್ಲ ಎಂದು ಸ್ವತಃ ಕುಟುಂಬಸ್ಥರೆ ಹೇಳಿಕೆ ನೀಡಿರುವದು ದೇಶದಾದ್ಯಂತ ವೈರಲ್ ಆಗಿದೆ.
ಸಾಮೂಹಿಕ ಅತ್ಯಾಚಾರ ನಡೆಸಿ ವೈದ್ಯೆಯೋರ್ವಳನ್ನು ಬೆಂಕಿ ಇಟ್ಟು ಕೊಂದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಬಲವಾದ ಕೂಗೂ ಎಲ್ಲೆಡೆ ಕೇಳಿ ಬರುತ್ತಿದೆ.
ನಾಲ್ವರು ಆರೋಪಿಗಳ ಪೈಕಿ ಓರ್ವ ಆರೋಪಿಯ ತಾಯಿ ಸಂತ್ರಸ್ತೆಯನ್ನು ಬೆಂಕಿ ಹಚ್ವಿ ಸುಟ್ಟಂತೆ ಮಗನನ್ನು ಸುಟ್ಟು ಹಾಕಿ ಎಂದು ಹೇಳುವ ಮೂಲಕ ಘೋರ ಕೃತ್ಯ ಎಸಗಿದ ಯಾರೇ ಆಗಲಿ ತಕ್ಕ ಶಿಕ್ಷೆಯಾಗಲಿ ಎಂಬುದು ಆ ಮಹಾ ತಾಯಿ ಹೇಳಿಕೆಯಾಗಿದೆ.
ಅಂತಹ ಹೇಳಿಕೆ ನೀಡಿದ ಆ ತಾಯಿಗೆ ಇದೀಗ ಎಲ್ಲೆಡೆ ಶಹಬ್ಬಾಶ್ ಗಿರಿ ದೊರೆಯುತ್ತಿರುವುದು ಕಂಡು ಬರುತ್ತಿದೆ.