ಪ್ರಮುಖ ಸುದ್ದಿ

ಗೊಂದಲದ ಗೂಡಾದ IDSMT ನಿವೇಶನ ಹಂಚಿಕೆ – ಹರಾಜು ರದ್ದು

ನೋಂದಣಿಯಾದ ನಿವೇಶನಗಳು ಸಹ ಹರಾಜು ಪ್ರಕ್ರಿಯೆಯಲ್ಲಿ ಪ್ರತ್ಯಕ್ಷಃ ಜನಾಕ್ರೋಶ

 

ನೋಂದಣಿಯಾದ ನಿವೇಶನಗಳು ಸಹ ಹರಾಜು ಪ್ರಕ್ರಿಯೆಯಲ್ಲಿ ಪ್ರತ್ಯಕ್ಷಃ ಜನಾಕ್ರೋಶ

ಗೊಂದಲದ ಗೂಡಾದ ನಿವೇಶನ ಹಂಚಿಕೆ ಃ ಹರಾಜು ರದ್ದು

ಶಹಾಪುರಃ ನಗರದ ಐಡಿಎಸ್‍ಎಂಟಿಯ 32 ಮೂಲೆ ನಿವೇಶನಗಳನ್ನು ಸಾರ್ವಜನಿಕವಾಗಿ ಹರಾಜು ಮಾಡುವ ಮೂಲಕ ಹಂಚಿಕೆ ಮಾಡಲು ಉದ್ದೇಶಿಸಿದ್ದ ನಗರಸಭೆ ಸಾರ್ವಜನಿಕರಿಂದ ಅರ್ಜಿಯನ್ನು ಅಹ್ವಾನಿಸಿ ಶನಿವಾರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿತು.

ಆದರೆ ಹರಾಜು ಪ್ರಕ್ರೀಯೆಯಲ್ಲಿ 32 ನಿವೇಶನಗಳ ಬದಲಿಗೆ ಬರಿ 19 ನಿವೇಶನಗಳನ್ನು ಮಾತ್ರ ಹರಾಜು ಮಾಡಲಾಗುತ್ತದೆ, ಇನ್ನುಳಿದ 13 ನಿವೇಶನಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಇಡಲಾಗುವದಿಲ್ಲ. ಕಾರಣ ಹೈಕೋರ್ಟ್‍ನಿಂದ ತಡೆಯಾಜ್ಞೆ ಬಂದಿದೆ ಎಂಬ ಸಬೂಬುನ್ನು ಪೌರಾಯುಕ್ತರು ನೀಡುತ್ತಿದ್ದಂತೆ ಇಡಿ ಸಭೆ ಗೊಂದಲದ ಗೂಡಾಗಿ ಪರಿಣಿಮಿಸಿತು. ಇದು ಪ್ರಸ್ತುತ ಹರಜು ಪ್ರಕ್ರಿಯೆ ರದ್ದುಗೊಳಿಸಿ ಮುಂದೂಡುವಂತಾಯಿತು.

ಆಕ್ರೋಶಕ್ಕೆ ಒಳಗಾದ ಪೌರಾಯುಕ್ತ ಕೊನೆಗೂ 3 ಗಂಟೆಗೆ ಸಭೆ ನಡೆಸಿ ಹರಾಜು ಪ್ರಕ್ರಿಯೆ ರದ್ದುಗೊಳಿಸಿದ್ದಾರೆ. ಮತ್ತೆ ಹರಾಜು ದಿನಾಂಕ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಸುಮಾರು 338 ಜನರು 2000 ಅರ್ಜಿ ಶುಲ್ಕ ಭರಿಸಿ ತಲಾ 50 ಸಾವಿರ ಡಿಡಿ ಕಟ್ಟಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದರು.

ಯಾವುದೇ ಮುನ್ಸೂಚನೆ ನೀಡದೆ 19 ನಿವೇಶನಗಳ ಸಾರ್ವಜನಿಕ ಹರಾಜಿಗೆ ಸಿದ್ಧತೆ ಮಾಡಿಕೊಂಡಿದ್ದ ಅಧಿಕಾರಿಗಳು ಸ್ಥಳಕ್ಕೆ ಬಂದು ಹರಾಜು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಸ್ಥಳೀಯರಿಂದ ವಿರೋಧ ವ್ಯಕ್ತಪಡಿಸಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಜನರು, 13 ರಲ್ಲಿ 8 ನಿವೇಶನಗಳು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಈಗಾಗಲೇ ನೊಂದಣಿಯಾಗಿವೆ. ಆದರೂ ನೀನು ಅದೇ ನಿವೇಶನಗಳನ್ನು ಹರಾಜಿಗೆ ಯಾವ ಆಧಾರದ ಮೇಲೆ ಹಾಕಿರುವಿರಿ.? ಅರ್ಜಿ ಶುಲ್ಕ ಇಎಂಡಿ ತೆಗೆದುಕೊಂಡ ಮೇಲೆ ಹರಾಜು ಮಾಡಲೇ ಬೇಕು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ನಿವೇಶನ ಹರಾಜು ಮಾಡಲು ಬಿಡುವುದಿಲ್ಲ. ನಿವೇಶನ ನೋಂದಣಿ, ಮುಟೇಷನ್ ಮಾಡಿಕೊಟ್ಟವರರು.? ನೀವೆ ತಾನೆ.? ಒಂದೇ ನಿವೇಶನವನ್ನು ಇಬ್ಬಿಬ್ಬರಿಗೆ ನೋಂದಣಿ, ಮುಟೇಷನ್ ಮಾಡಿಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನಿಮ್ಮಂಥ ಭ್ರಷ್ಟ ಅಧಿಕಾರಿಗಳಿಂದಲೇ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಜನಾಕ್ರೋಶ ವ್ಯಕ್ತವಾಯಿತು.

ಐಡಿಎಸ್‍ಎಂಟಿ ಕಮಿಟಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರು ಬರಲಾರದೆ ನೀವು ಯಾವ ಆಧಾರದ ಮೇಲೆ ಹರಾಜು ನಡೆಸುತ್ತೀರಿ.? ಹರಾಜು ನಡೆಸಲು ನಿಮಗೆನು ಅಧಿಕಾರವಿದೆ. ನೀವು ಕಾಣದ ಕೈ ತಾಳಕ್ಕೆ ಕುಣಿಯುತ್ತಿದ್ದೀರಿ. ಅಲ್ಲದೆ ಅದಾಗಲೇ ಮಾರಾಟವಾಗಿದ್ದ ನಿವೇಶನವನ್ನು ಬೇರೆ ವ್ಯಕ್ತಿಯೊಬ್ಬರಿಗೆ ಮರು ಮಾರಾಟ ಮಾಡಿದ್ದಿರಿ. ಈ ರೀತಿ ಮಾಡಲು ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೇನಾ ಎಂದು ಪೌರಾÀಯುಕ್ತರಿಗೆ ನೇರವಾಗಿ ಪ್ರಶ್ನಿಸಿದ ಘಟನೆ ಜರುಗಿತು. ಜನರ ಆಕ್ರೋಶ ಮತ್ತು ಪ್ರಶ್ನೆಗೆ ಉತ್ತರಿಸದೆ ಪೌರಾಯುಕ್ತ ಸಪ್ಪೆ ಮೋರೆ ಹಾಕಿಕೊಂಡು ನಿಂತಿದ್ದರು. ಕೊನೆಗೆ ಹರಾಜು ರದ್ದುಗೊಳಿಸಿದ ಆದೇಶಿಸಿ ಹೊರಟು ಹೋದರು.

ನಗರ ಸಭೆಯ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ಪ್ರಭಾವಿ ವ್ಯಕ್ತಿಯ ಕೈಗೊಂಬೆಯಂತೆ ನಗರಸಭೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿವೇಶನಗಳನ್ನು ಮೊದಲು ಮಾರಾಟ ಮಾಡಿದ ಅಧಿಕಾರಿಗಳು ಈಗ ಪುನ ಅದೇ ನಿವೇಶನಗಳಿಗೆ ಹರಾಜು ಇಟ್ಟಿದ್ದಾರೆ. ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇದು ತಾಜಾ ಉದಾಹರಣೆಯಾಗಿದೆ.

-ಅಪ್ಪಣ್ಣ ದಶವಂತ ನಗರಸಭೆ ಸದಸ್ಯರು ಶಹಾಪುರ.

ಜನ ಕದ್ದು ಮುಚ್ಚಿ ಬರೆದು ಕೊಳ್ಳುವ ಮಟಕ ಚೀಟಿಗೆ ಬೆಲೆ ಇದೆ. ಆದರೆ ಹಣ ಪಡೆದು ಇವರು ನೀಡಿರುವ ಚೀಟಿಗೆ ಯಾವುದೇ ಬೆಲೆ ಇಲ್ಲ. ರಸೀದಿ ಕೊಡದೆ ಬಿಳಿ ಹಾಳೆಯಲ್ಲಿ ಬರೆದು ಕೊಟ್ಟಿದ್ದನ್ನು ನೋಡಿದರೆ ನಗರ ಸಭೆಯ ಆಡಳಿತ ವ್ಯವಸ್ಥೆ ಹೇಗಿದೆ ಎಂದು ತಿಳಿಯುತ್ತದೆ. ಕಾನೂನು ಬಾಹಿರವಾಗಿ ನಿವೇಶನ ಹರಾಜು ಮಾಡುವಲು ಹೊರಟಿರುವ ಅಧಿಕಾರಿಗಳ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಬೇಕು.

-ಮಹೇಶಗೌಡ ಸುಬೇದಾರ.
ರಾಜ್ಯ ಕಾರ್ಯಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ.

Related Articles

Leave a Reply

Your email address will not be published. Required fields are marked *

Back to top button