ಪ್ರಮುಖ ಸುದ್ದಿ

ಜಿಲ್ಲಾಧಿಕಾರಿ ಮಂಜುನಾಥರಿಂದ ಅಕ್ರಮ ಮರಳು ಜಪ್ತಿ

ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಜಪ್ತಿ

ಯಾದಗಿರಿಃ ಜಿಲ್ಲೆಯ ಸುರಪೂರ ತಾಲ್ಲೂಕಿನ ದೇವತ್ಕಲ್ ಗ್ರಾಮದ ಸಮೀಪ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ರಮ ಮರಳನ್ನು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಗುರುವಾರ ಜಪ್ತಿ ಮಾಡಿದರು.

ಜಿಲ್ಲೆಯ ನಾರಾಯಣಪೂರ ಬಸವಸಾಗರ ಜಲಾಶಯದ ವೀಕ್ಷಣೆಗೆ ಜಿಲ್ಲಾಧಿಕಾರಿಗಳು ತೆರಳುತ್ತಿದ್ದಾಗ, ದೇವತ್ಕಲ್ ಗ್ರಾಮದ ಸಮೀಪ ರಾಜ್ಯ ಹೆದ್ದಾರಿಯ ಮೇಲೆ ಟಿಪ್ಪರ್‍ನಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಮರಳು ತುಂಬಿದ ಟಿಪ್ಪರ್ ತಡೆಯುತ್ತಿದ್ದಂತೆ ಅದರ ಚಾಲಕ ಪರಾರಿಯಾಗಿದ್ದಾನೆ.

ಹತ್ತಿರದ ಖಾಸಗಿ ಜಮೀನಿನಲ್ಲಿ 2-3 ಕಡೆ ಅಕ್ರಮವಾಗಿ ಸಂಗ್ರಹಿಸಿದ್ದ ರಾಶಿರಾಶಿ ಮರಳು, ಸ್ಥಳದಲ್ಲಿದ್ದ ಜೆಸಿಬಿ ಹಾಗೂ ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಎರಡು ಕಡೆ ಮರಳು ಸಾಗಣೆಗೆ ಪರವಾನಿಗೆ ನೀಡಲಾಗಿದೆ. ಇವುಗಳಲ್ಲಿ ಒಂದು ಮಾತ್ರ ಪ್ರಾರಂಭವಾಗಿದೆ.

ಇದರಲ್ಲಿ ವೇಬ್ರಿಜ್ ನಿರ್ಮಿಸಿದ್ದು, ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಾಯಲ್ಟಿ ಕಟ್ಟುತ್ತಿದ್ದಾರೆ. ಅಲ್ಲದೇ, ಜಿಲ್ಲಾಡಳಿತಕ್ಕೆ ಪ್ರತಿದಿನ ಮರಳು ಸರಬರಾಜು ಆದ ಬಗ್ಗೆ ಮಾಹಿತಿ ಬರುತ್ತಿದೆ. ಬೇರೆ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಮರಳು ಸಾಗಣೆ ಮಾಡಿದರೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಬೇಕು. ಇಲ್ಲವಾದರೆ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button