ಪ್ರಮುಖ ಸುದ್ದಿ
IMA ಹಗರಣದ ಆರೋಪಿ ವಿಜಯ ಶಂಕರ್ ಆತ್ಮಹತ್ಯೆ
IMA ಹಗರಣದ ಆರೋಪಿ ವಿಜಯ ಶಂಕರ್ ಆತ್ಮಹತ್ಯೆ
ಬೆಂಗಳೂರಃ ಐಎಂಎ ಹಗರಣ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ವಿಜಯ ಶಂಕರ್ ತಮ್ಮ ಜಯನಗರ ನಿವಾಸದಲ್ಲಿ ಆತ್ಮಹತ್ಯೆ ಗೆ ಶರಣಾದ ಘಟನೆ ನಡೆದಿದೆ.
ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ಇವರು ಐಎಂಎ ದೊಡ್ಡ ಹಗರಣದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಜುಲೈ 8, 2019 ರಂದು ಆಗಿನ ಉತ್ತರ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ ಅವರ ಹೇಳಿಕೆ ಪ್ರಕಾರ ಲಂಚ ಪಡೆದ ಆರೋಪದಲ್ಲಿ ವಿಜಯ್ ಶಂಕರ ಅವರನ್ನು ಎಸ್ಐಟಿ ಬಂಧಿಸಿತ್ತು.
ಆಗ ಜಾಮೀನು ಪಡೆದು ಅವರು ಹೊರ ಬಂದಿದ್ದರು. ಆರೋಪದಿಂದ ಹಗರಣ ಪ್ರಕರಣದಿಂದ ಸಾಕಷ್ಟು ನೊಂದಿದ್ದ ಅವರು ಆತ್ಮಹತ್ಯೆ ದಾರಿ ತುಳಿದಿರಬಹುದು ಎನ್ನಲಾಗಿದೆ.