ಕಾವ್ಯ
ಸುಜಲ ಮಂದಾಕಿನಿ ಮುದನೂರ ಬರೆದ ಕಾವ್ಯ
ಸುಜಲ
ಶಹಾಪುರ
ಕೋಟೆಯೊಳಿರುವ
ಮಂದಾಕಿನಿ
ಸುಜಲಧಾತೆಯ
ಸುರಂಗ ಝರಿಯ
ಕಣಿ.
ಇತಿಹಾಸದುದ್ದಕ್ಕು
ಹೆಸರಾದ ಕಥಾನಕ
ಈ ಕಂದಕ
ಹಿಂದೆ ಕೇಳಿದ
ಹಿರಿಯರ ಕಥೆಯೂ
ರೋಚಕ.
ಇಲ್ಲಿ
ಬಿಟ್ಟ ಬೆಳ್ಳಿಯ ಬಟ್ಟಲು
ತೇಲಿತ್ತು, ಅಣಬಿ
ಗ್ರಾಮದ ಶಿವನ
ಹೊಂಡದಲ್ಲಿ ಎಂಬ
ಪ್ರತೀತಿ.
ವಿಶೇಷ ದಿನದಂದು
ಈ ಸುಜಲಧಾತೆಯಲ್ಲಿ
ಮಿಂದು, ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸುವದು ವಾಡಿಕೆ.
ದಡದಿ ಇರುವ ಹನುಮ
ದೇವರ ಸನ್ನಿಧಿಯಲ್ಲಿ,
ಚಿತ್ತಶುದ್ಧಿಗಾಗಿ, ಮಂತ್ರಶಕ್ತಿಗಾಗಿ,
ಮಂಡಲಾಧೀಶನ ಗೆಲುವಿಗಾಗಿ,
ಪ್ರಾರ್ಥನೆ ಗೈಯುತ್ತಿದ್ದರಂತೆ
ಅರಸರ ಸಂತತಿ.
ಇಂದಿಗೂ ಬತ್ತದ
ಮಂದಾಕಿನಿ,
ಸುಜಲ ಸುರಂಗದ ಝರಿ
ಜನರ ನಂಬಿಕೆಯ
ಗರಿ.
ಇಂದಿಗೂ ಸಂಕ್ರಾಂತಿ
ಹಬ್ಬದಂದು ಭಕ್ತರು
ಬರುವರು ಇಲ್ಲಿಗೆ,
ಮಂದಾಕಿನ ಕೊಳದಲ್ಲಿ
ಸ್ನಾನವಗೈದು ಶುಭ್ರವಾಗಿ
ದಾರಿದ್ರ್ಯವ ಕಳಚಿ,
ಪಾಪ ನಾಶವ ಹೊಂದಿ
ಪಾವನವಾಗುವರು
ದೇವರ ಸಾನಿಧ್ಯದಲ್ಲಿ.
–ಮಲ್ಲಿಕಾರ್ಜುನ ಮುದ್ನೂರ.
Excelent