ಪ್ರಮುಖ ಸುದ್ದಿ
ಸೇತುವೆ ಮೇಲೇರಿದ ಟಿಪ್ಪರ್ ತಪ್ಪಿದ ಅನಾಹುತ
ಯಾದಗಿರಿಃ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಚಾಲಕನ ಆಯತಪ್ಪಿ ಟಿಪ್ಪರ್‍ವೊಂದು ಹಳ್ಳದ ಸೇತುವೆ ಮೇಲೇರಿ ನಿಂತ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಮರಳು ಸಾಗಾಣಿಕೆಯ ಟಿಪ್ಪರ್ ಇದಾಗಿದ್ದು, ರಾತ್ರಿ ವೇಗವಾಗಿ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲೇರಿದ ಅದೃಷ್ಟವಶಾತ್ ಎದುರಿಗೆ ಯಾ ವಾಹನ ಬರದ ಕಾರಣ ಭಾರಿ ಅನಾಹುತ್ವೊಂದ ತಪ್ಪಿದಂತಾಗಿದೆ.
ಘಟನೆಯಲ್ಲಿ ಚಾಲಕ ಪಾರಾಗಿದ್ದು, ವಾಹನ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಚಾಲಕರ ನಿರ್ಲಕ್ಷದಿಂದ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರ ಶೀರ್ಷಿಕೆ