ಪ್ರಮುಖ ಸುದ್ದಿ
ಜಿಯೋ ಬೆನ್ನಲ್ಲೇ ಏರ್ಟೆಲ್ನಿಂದಲೂ ಬೆಲೆ ಹೆಚ್ಚಳ..!

ರಿಲಾಯನ್ಸ್ ಜಿಯೋ ಮೊಬೈಲ್ ಧ್ವನಿಕರೆ ಮತ್ತು ಡಾಟಾ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್ಟೆಲ್ ಕೂಡ ಬೆಲೆ ಏರಿಕೆ ಮಾಡಿದೆ. ಏರ್ಟೆಲ್ ಸಂಸ್ಥೆ ವಿವಿಧ ಪ್ಲಾನ್ಗಳಿಗೆ ಶೇ. 11ರಿಂದ ಶೇ. 21ರವರೆಗೂ ದರ ಹೆಚ್ಚಳ ಮಾಡಿದೆ. ರಿಲಾಯನ್ಸ್ ಜಿಯೋ ಶೇ. 12ರಿಂದ ಶೇ. 27ರವರೆಗೂ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಹೊಸ ದರಗಳು ಜುಲೈ 3ರಂದು ಜಾರಿಗೆ ಬರಲಿದೆ.
ನವದೆಹಲಿ: ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಜಿಯೋ ಅಗ್ಗದ ದರಕ್ಕೆ ಮೊಬೈಲ್ ಮತ್ತು ಡಾಟಾ ನೀಡಿ ಬೆಲೆ ಸಮರಕ್ಕೆ ಅಡಿ ಇಟ್ಟಿತ್ತು. ಇದೀಗ ಬೆಲೆ ಏರಿಕೆಯಲ್ಲೂ ಮುಂದಾಳತ್ವ ವಹಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ನಿನ್ನೆ ವಿವಿಧ ಪ್ಲಾನ್ಗಳಿಗೆ ಶೇ. 27ರವರೆಗೂ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಏರ್ಟೆಲ್ ಕೂಡ ಶೇ. 21ರವರೆಗೂ ಬೆಲೆ ಏರಿಸಲು ನಿರ್ಧರಿಸಿದೆ. ಎರಡೂ ಟೆಲಿಕಾಂ ಆಪರೇಟರ್ಗಳ ಹೊಸ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.