ಬಾರದ ತ್ಯಾಜ್ಯ ವಿಲೇವಾರಿ ಗಾಡಿಃ ಸಂಗ್ರಹಿಸಿಟ್ಟ ತ್ಯಾಜ್ಯ ಬೀರುತ್ತಿದೆ ಗಬ್ಬು ವಾಸನೆ
ಇಪ್ಪತ್ತು ದಿನಗಳಿಂದ ಕಸದ ಗಾಡಿ ಪತ್ತೆ ಇಲ್ಲ…!!
ವಿಜಯಪುರ: ಸ್ವಚ್ಛ ಭಾರತ ಸ್ವಸ್ಥ ಭಾರತ ಎನ್ನುವ ಘೋಷಣೆ ಕೇವಲ ಬಾಯಿ ಮಾತಿಗೆ ಎಂಬತ್ತಾಗಿದೆ.
ಹೌದು ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಇಪ್ಪತ್ತು ದಿನಗಳಿಂದ ಕಸದ ಗಾಡಿಯ ಸುಳಿವಿಲ್ಲ.
ಗ್ರಾಮ ಪಂಚಾಯತಿಯಿಂದ ಹಸಿ ಕಸ, ಹಾಗೂ ಒಣ ಕಸಗಳು ವಿಂಗಡಿಸಿ ಹಾಕಲು ಮನೆಯೊಂದಕ್ಕೆ ಎರಡು ಬಕೆಟ್ ಗಳನ್ನು ವಿತರಣೆ ಮಾಡಲಾಗಿದೆ. ಆದರೆ ಬಕೆಟ್ ವಿತರಣೆ ಮಾಡಿದರೆ ಕೆಲಸ ಮುಗಿಯುತ್ತಾ? ಇದರಿಂದ ಪರಿಸರ ಸ್ವಚ್ಛವಾಗುತ್ತಾ? ಎನ್ನುವುದು ನಮ್ಮ ಪ್ರಶ್ನೆ.
ಮನೆಗಳಲ್ಲಿ ಕಸ ತುಂಬಿಟ್ಟು ಕೊಳ್ಳುವುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಲಿದೆ. ಇದರ ಬಗ್ಗೆ ಗ್ರಾಮ ಪಂಚಾಯತಿ ವಿಚಾರಣೆ ಮಾಡಿದರೆ ಗಾಡಿಯಲ್ಲಿ ತಾಂತ್ರಿಕ ದೋಷಗಳಿವೆ. ರಿಪೇರಿ ಮಾಡಲು ಕಳಿಸಿಕೊಳಲಾಗಿದೆ ಎಂದು ಹೇಳುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಮೊದಲೆ ಕೊರೊನಾ ಹಾವಳಿ ಹೆಚ್ಚಾಗುತ್ತಲಿದೆ. ಇಗೀರುವಾಗ ಕಸದ ಗಾಡಿ ಪ್ರತಿದಿನ ಬರದೆ ಇರುವುದರಿಂದ ಮನೆಯ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದರಲ್ಲಿ ಅನುಮಾನವಿಲ್ಲ.
ಗಾಡಿಯಲ್ಲಿ ತಾಂತ್ರಿಕ ದೋಷಗಳು ಇವೆ. ರಿಪೇರಿಗಾಗಿ ಇಂಡಿಗೆ ಕಳಿಸಿಕೊಡಲಾಗಿದೆ. ಗಣೇಶ ಚತುರ್ಥಿ ಇರುವುದರಿಂದ ಗಾಡಿಯ ಚಾಲಕರು ರಜೆಯಲ್ಲಿ ಇದ್ದರು ಹೀಗಾಗಿ ತಡವಾಗಿದೆ. ಆದಷ್ಟು ಬೇಗನೆ ಕಸದ ಗಾಡಿಯನ್ನು ತರಿಸಿ ಕಸದ ಸಂಗ್ರಹಣೆ ಕಳುಹಿಸುವ ಕೆಸಲ ಮಾಡಲಾಗುತ್ತದೆ.
-ಜೆ ಜಿ ಕುಲಕರ್ಣಿ
ಅಥರ್ಗಾ ಪಿ.ಡಿ..
-ವರದಿ
ಕಾಂಚನಾ. ಬಿ. ಪೂಜಾರಿ.