ಕೊಹ್ಲಿ ಕರಾಮತ್ತು : ವೆಸ್ಟ್ ಇಂಡೀಸ್ ಮಣಿಸಿದ ಟೀಮ್ ಇಂಡಿಯಾ!
ಬೆಂಗಳೂರು : ಟಿ-20 ಮೊದಲ ಪಂದ್ಯದಲ್ಲಿ 20 ಓವರ್ ನಲ್ಲಿ 9 ವಿಕಟ್ ಪಡೆದು ಕೇವಲ 95 ರನ್ ಗೆ ಕಟ್ಟಿ ಹಾಕಿತು. ಟೀಮ್ ಇಂಡಿಯಾದ ಕರಾರುವಕ್ ಬೌಲಿಂಗ್ ಎದುರು ಬ್ಯಾಟ್ ಬೀಸಲಾಗದೆ ವಿಂಡೀಸ್ ಪಡೆ ಪೆವಿಲಿಯನ್ ಪೆರೇಡ್ ನಡೆಸಿತು. ಆದರೆ, ಉತ್ತರ ನೀಡಲು ಬಂದ ಟೀಮ್ ಇಂಡಿಯಾ ಸಹ ಆರಂಭದಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನವೇನೂ ನೀಡಲಿಲ್ಲ. ಕೇವಲ 1ರನ್ ಗೆ ಶಿಖರ್ ಧವನ್ ಎಲ್ ಬಿಡಬ್ಲೂ ಔಟ್ ಆದರೆ ರೋಹಿತ್ ಶರ್ಮಾ 24ರನ್ ಬಾರಿಸಿ ಆರನೇ ಓವರ್ ನಲ್ಲಿ ಕ್ಯಾಚಿತ್ತು ಹೊರಟರು. ಬಳಿಕ ಬಂದ ರಿಷಬ್ ಪಂತ್ ಖಾತೆ ತೆರೆಯದೇ ಹಿಂದಿರುಗಿದರು.
ವಿಕೆಟ್ ಪತನದಿಂದ ನಿಧಾನಗತಿಯ ಆಟವಾಡಿದ ಪರಿಣಾಮ ಟೀಮ್ ಇಂಡಿಯಾ 10ನೇ ಓವರ್ ಗೆ 3ವಿಕೆಟ್ ಕಳೆದುಕೊಂಡು 52 ರನ್ ಬಾರಿಸಿತು. ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಮೈದಾನದಲ್ಲಿದ್ದು ನಾಯಕನ ಆಟವಾಡಿ ಗೆಲುವಿನ ದಾರಿ ತೋರಿದರು. 29 ಬಾಲ್ ಗೆ 19 ರನ್ ಬಾರಿಸಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟಾದರು. ಬಳಿಕ ಕೃನಾಲ್ ಪಾಂಡ್ಯ ಸಿಕ್ಸರ್ ಬಾರಿಸಿ ಮಿಂಚಿನ ಆಟವಾಡಲೆತ್ನಿಸಿ 14 ಬಾಲ್ ಗೆ 12 ರನ್ ಬಾರಿಸಿ ಬೋಲ್ಡ್ ಔಟಾದರು. ಕೊನೆಗೆ ಸುಂದರ್ ಸಿಕ್ಸ್ ಬಾರಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. 6ವಿಕೆಟ್ ಕಳೆದುಕೊಂಡ ಭಾರತ 17.2 ಓವರ್ ನಲ್ಲಿ 98 ರನ್ ಬಾರಿಸಿ ಗೆಲುವಿನ ನಗೆ ಬೀರಿತು.