ನಾಳೆ ಅಭಿನಂದನ್ ಬಿಡುಗಡೆ- ಪಾಕಿಸ್ತಾನ ಘೋಷಣೆ
ಶಾಂತಿ ಮಂತ್ರ ಜಪಿಸಿದ ಪಾಪಿ
ಮೋದಿ ಜೊತೆ ಮಾತುಕತೆಗೆ ಸಿದ್ಧ-ಪಾಕಸ್ತಾನ
10 ದೇಶಗಳ ರಾಯಬಾರಿ ಜೊತೆ ಭಾರತ ಮಾತುಕತೆ
ವಿನಯವಾಣಿಃ ಭಾರತದ ಪೈಲಟ್ ಅಭಿನಂದನ್ ರನ್ನು ನಾಳೆ ಬಿಡುಗಡೆಗೊಳಿಸಲಾಗುವದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಲ್ಲಿನ ಸಂಸತ್‍ನಲ್ಲಿ ಇದೀಗ ಘೋಷಣೆ ಮಾಡಿದ್ದಾರೆ. ಅಲ್ಲದೆ ಭಾರತದ ಪೈಲಟ್ ಅಭಿನಂದ ಸುರಕ್ಷಿತವಾಗಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಮತ್ತು ಶಾಂತತೆ ಕಾಪಾಡಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ರಾಜತಾಂತ್ರಿಕ ಗೆಲುವನ್ನು ಭಾರತ ಸಾಧಿಸಿದೆ ಎಂದು ಹೇಳಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಲಟ್ ಬಿಡುಗಡೆಗೆ ಪಾಕ್ ಮೇಲೆ ಒತ್ತಡವಿತ್ತು.
ಅಲ್ಲದೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವದಿಲ್ಲ ಎಂಬುದನ್ನು ಭಾರತ ಎಚ್ಚರಿಕೆಯೂ ಸಹ ನೀಡಿತ್ತು.
ಅಮೇರಿಕಾ, ಜರ್ಮನಿ, ಜಪಾನ್, ರಷ್ಯ ಸೇರಿದಂತೆ ಚೀನಾ ಸಹ ಭಯೋತ್ಪಾದಕ ನಿರ್ಮೂಲನೆ ಕುರಿತು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆ, ಪಾಕ್ ಅನಿವಾರ್ಯವಾಗಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಬಂಧನದಲ್ಲಿದ್ದ ಅಭಿನಂದನ್ ರನ್ನು ಬಿಡುಗಡೆ ಮಾಡುತ್ತೇನೆ ಎಂದು ಘೋಷಣೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.