ಡಾನ್ ದಾವೂದ್ ನನ್ನು ಹೊರ ನಡೆಯುವಂತೆ ಹೇಳಿದ್ದ ಕ್ರಿಕೇಟಿಗ ಯಾರು.?
ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನನ್ನು ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕಿಂಗ್ ಆಫ್ ದಿ ಬೆಟ್ಟಿಂಗ್ ಅಂತಾ ಕರೆಯಲಾಗುತಿತ್ತು. ಆಗ ಭೂಗತ ಪಾತಕಿ ದಾವೂದ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತ್ರೆ ಕಣ್ಣೀರು ಹಾಕುತ್ತಿದ್ದನಂತೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ರಾಜಾರೋಷವಾಗಿ ಭಾಗವಹಿಸುತ್ತಿದ್ದ ಕಾಲವದು. 1986ರಲ್ಲಿ ಕ್ರಿಕೆಟ್ ಆಟಗಾರರಿಗೆ ದಾವೂದ್ ವಾಹನ ನೀಡುವ ಆಫರ್ ನೀಡಿದ್ದನಂತೆ. ಈ ವೇಳೆ ಭಾರತೀಯ ತಂಡದ ಕ್ಯಾಪ್ಟನ್ ಆಗಿದ್ದ ತುಂಬಾ ಹೆಸರುವಾಸಿಯಾಗಿದ್ದ ಆಟಗಾರ ಕಪಿಲ್ ದೇವ್ ಪಾತಕಿ ದಾವೂದ್ ಗೆ ಸರಿಯಾಗಿ ಪಾಠ ಕಲಿಸಿದ್ದರಂತೆ.
1986 ರಲ್ಲಿ ಭೂಗತ ಪಾತಕಿ ದಾವೂದ್, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಬಂದು, ಕ್ರಿಕೆಟ್ ಆಟಗಾರರಿಗೆ ಆಮಿಷವೊಡ್ಡಿದ್ದನಂತೆ. ಪಾಕಿಸ್ತಾನವನ್ನು ಸೋಲಿಸಿದ್ರೆ ಪ್ರತಿಯೊಬ್ಬ ಆಟಗಾರರಿಗೆ ಕಾರ್ವೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದ. ಆಗಿನ ಕಾಲದಲ್ಲಿ ಫೇಮಸ್ ಆಗಿದ್ದ ಟೋಯೋಟಾ ಕೊರೋಲಾ ಕೊಡುವುದಾಗಿ ತಿಳಿಸಿದನಂತೆ.
ಡ್ರೆಸ್ಸಿಂಗ್ ರೂಂನಲ್ಲಿ ಈ ಬಗ್ಗೆ ಮಾತುಕತೆಯಾಗ್ತಾ ಇರುವ ವೇಳೆ ಪತ್ರಿಕಾ ಗೋಷ್ಠಿ ಮುಗಿಸಿ ಅಲ್ಲಿಗೆ ಬಂದಿದ್ದ ಕಪಿಲ್ ದೇವ್. ಮೊದಲು ಮೊಹಮ್ಮದ್ ರನ್ನು ನೋಡಿದ ಕಪಿಲ್, ನೀವು ಹೊರಗೆ ಹೋಗಿ ಎಂದಿದ್ದಾರೆ. ನಂತ್ರ ದಾವೂದ್ ನೋಡಿ, ನೀವು ಯಾರು? ಹೊರಗೆ ಹೋಗಿ ನಡೆಯಿರಿ ಎಂದು ಖಡಕ್ ಆಗಿ ಹೇಳಿದ್ದಾರಂತೆ. ಕಪಿಲ್ ದೇವ್ ಧ್ವನಿ ಶೈಲಿಗೆ ದಾವೂದ್ ಅಲ್ಲಿಂದ ಸುಮ್ಮನೆ ಹೊರ ನಡೆದರಂತೆ. ಈ ವಿಷಯ ಡಿಜಿಟಲ್ ಮಾಧ್ಯಮದಲ್ಲಿ ತುಂಬಾ ಹರಿದಾಡುತ್ತಿದ್ದು, ಯುವ ಸಮೂಹದಿಂದ ಕಪಿಲ್ ನಡೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.