ಪ್ರಮುಖ ಸುದ್ದಿ
ಸಿಸಿಬಿ ಕಚೇರಿಗೆ ದಿಗಂತ-ಐಂದ್ರಿತಾ ಹಾಜರ್.! ಮೊದಲು ಐಂದ್ರಿತಾ ವಿಚಾರಣೆಆರಂಭ
ಸಿಸಿಬಿ ಕಚೇರಿಗೆ ದಿಗಂತ-ಐಂದ್ರಿತಾ ಹಾಜರ್.!
ಬೆಂಗಳೂರಃ ಸ್ಯಾಂಡಲ್ ವುಡ್ ಗೆ ತಗುಲಿದ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನಟ ದಿಗಂತ ಹಾಗೂ ನಟಿ ಐಂದ್ರಿತಾ ರೈ ದಂಪತಿಗೆ ನೀಡಿದ ನೋಟಿಸ್ ಅನ್ವಯ, ಐಂದ್ರಿತಾ ಮತ್ತು ದಿಗಂತ್ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.
ಇನ್ನೇನು ಕಚೇರಿಯೊಳಗೆ ಕರೆದೊಯ್ಯುವ ಸಿಸಿಬಿ ತಂಡ ಅವರ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.
ಶ್ರೀಲಂಕಾದ ಕ್ಯಾಸಿನೋ ದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಆರೋಪಿ ನಟಿ ರಾಗಿಣಿ ಜೊತೆ ಈ ಇಬ್ಬರು ಕ್ಯಾಸಿನೋದಲ್ಲಿ ನಡೆಯವ ಪಾರ್ಟಿಯಲ್ಲಿ ಭಾಗವಹಿಸಿ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರು ಎನ್ನುವ ಮಾಹಿತಿ ಅದಕ್ಕೇ ಬೇಕಾದ ಸಾಕ್ಷಿ ದೊರಕಿರುವ ಕಾರಣ ಸಿಸಿಬಿ ಅಧಿಕಾರಿಗಳು ಇವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಮೊದಲು ಐಂದ್ರಿತಾ ವಿಚಾರಣೆ ನಡೆಸುತ್ತಿರುವ ಪೊಲೀಸರು, ನಂತರ ನಟ ದಿಗಂತರ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.