ಪ್ರಮುಖ ಸುದ್ದಿ
ಶ್ರೀರಾಮುಲುಗೆ ಜೆ.ಎನ್.ಗಣೇಶ ಹಾಕಿದ ಸವಾಲೇನು ಗೊತ್ತೆ.?
ವಿವಿ ಡೆಸ್ಕ್ಃ ಸಿದ್ರಾಮಯ್ಯ ಏಕಾಂಗಿ ಅಲ್ಲ. ಅವರ ಹಿಂದೆ ನಾನಿದ್ದೇನೆ. ಶ್ರೀರಾಮುಲು ಅವರೇ ಮೊದಲು ನನ್ನ ವಿರುದ್ಧ ಸ್ಪರ್ಧಿಸಿ ಗೆಲವು ಸಾಧಿಸಿ ಆ ಮೇಲೆ ಸಿದ್ರಾಮಯ್ಯನವರ ವಿರುದ್ಧ ಸ್ಪರ್ಧಿಸುವರಂತೆ ಎಂದು ಜೆ.ಎನ್.ಗಣೇಶ ಶ್ರೀರಾಮುಲು ಅವರಿಗೆ ಸವಾಲೆಸೆದಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ ಅವರು, ಸಿದ್ರಾಮಯ್ಯನವರ ವಿರುದ್ಧ ನೀವು ಗೆಲ್ಲಲು ಆಗಲ್ಲ. ಸಿದ್ರಾಮಯ್ಯಗೆ ಸವಾಲೇನು ಎಸೆಯುತ್ತೀರಾ ರಾಮುಲ ಅವರೇ ನನ್ನ ವಿರುದ್ಧ ಸ್ಪರ್ಧಿಸಿ ನೋಡುವ ಎಂಬ ಧಾಟಿಯಲ್ಲಿ ಸಿದ್ದು ಅವರ ಬೆಂಬಲವಾಗಿ ಅವರು ಗುಡುಗಿದ್ದಾರೆ.