ಹಂಚನಾಳ ಗ್ರಾಮದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ
ಜಾನುವಾರು ಉಚಿತ ಚಿಕಿತ್ಸಾ ಶಿಬಿರ
yadgiri, ಶಹಾಪುರಃ ತಾಲೂಕಿನ ಹಂಚನಾಳ ಗ್ರಾಮದಲ್ಲಿ ಶನಿವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಉಚಿತ ಜಾನುವಾರುಗಳಿಗೆ ಚಿಕಿತ್ಸಾ ಶಿಬಿರ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಶು ಇಲಾಖೆ ಅಧಿಕಾರಿ ಷನ್ಮುಖ ಗೊಂಗಡಿ, ತಾಲೂಕಿನಲ್ಲಿ ಜಾನುವಾರುಗಳಿಗೆ ಲಂಪಿ ಸ್ಕಿನ್ ರೋಗ ಬರುತ್ತಿದ್ದು, ರೈತರು ಜಾಗುರುಕರಾಗಿ ಇರಬೇಕು. ರೋಗ ಲಕ್ಷಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಪಶು ಚಿಕಿತ್ಸೆ ಕೇಂದ್ರ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಲ್ಲದೆ ಲಿಂಪಿ ಸ್ಕಿನ್ ತಗುಲಿದ ಜಾನುವರುಗಳನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ 350 ಜಾನುವಾರುಗಳನ್ನು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. 15 ಲಂಪಿ ಸ್ಕಿನ್ ರೋಗದ ಜಾನುವಾರುಗಳಿಗೆ ಮಿನಿರಲ್ ಮಿಕ್ಸ್ ಠಾಣಿಕ್ ಟ್ಯಾಬ್ಲೆಟ್ ನೀಡಲಾಯಿತು. ಉಳಿದ 350 ಜಾನುವಾರುಗಳಿಗೆ ಬಿಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ ಟ್ಯಾಬ್ಲೆಟ್ ನೀಡಲಾಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿಗಳಾದ ವಿಷ್ಣುವರ್ಧನ ರಡ್ಡಿ, ಸಿನೀಯರ್ ಇನ್ಸಪೆಕ್ಟರ್ ನಜೀರ್, ಸಹಾಯಕ ವೈದ್ಯರಾದ ಸಿದ್ದಪ್ಪ, ಶಿವಶರಣ, ಅಮರೀಶ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.